ಸ್ಕೂಲ್ ಆಫ್ ಬಿಜಿನೆಸ್ ಸ್ಟಡೀಸ್‌ನ ಡೀನ್ ಪ್ರೊ.ಬಿನೋಯ್ ಟಿ.ಎ. ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ರಾಷ್ಟ್ರೀಯ ಸಂಸ್ಥೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿಯ ಪ್ರಾಧ್ಯಾಪಕ ಡಾ.ಸಚ್ಚಿದಾನಂದ ಮುಖರ್ಜಿ, ಪ್ರಭಾರ ಕುಲಸಚಿವ ಪ್ರೊ.ವಿ.ಬಿ.ಸಮೀರ್ ಕುಮಾರ್, ಪ್ರಭಾರ ಹಣಕಾಸು ಅಧಿಕಾರಿ ಡಾ.ಮಿನಿಮೋಲ್ ಎಂ.ಸಿ., ಪ್ರಭಾರ ಡೀನ್ ಪ್ರೊ.ಎ.ವಿ.ಸಿಜಿನ್ ಕುಮಾರ್ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮುಖ್ಯಸ್ಥ ಪ್ರೊ.ಸಾಜಿ ಟಿ.ಜಿ. ಸ್ವಾಗತಿಸಿದರು. ಸಮ್ಮೇಳನ ಕಾರ್ಯದರ್ಶಿ ಡಾ.ಕೆ.ಶ್ರವಣ ವಂದಿಸಿದರು.