ಕಾಸರಗೋಡು: ಓಣಂ ಹಬ್ಬವನ್ನು ಪ್ಲಾಸ್ಟಿಕ್ ಹಾಗೂ ಮಾಲಿನ್ಯಮುಕ್ತವಾಗಿ ಆಚರಿಸಲು ‘ಹಸಿರು ಓಣಂ’ ಸಂದೇಶ ಸಾರುವ ಉದ್ದೇಶದಿಂದ ಶುಚಿತ್ವ ಮಿಷನ್ ಆಯೋಜಿಸಿದ್ದ ‘ವಾವೇಲಿ ಯಾತ್ರೆ’ಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು.
ಮಾವೇಲಿ, ಜಿಲ್ಲಾಧಿಕಾರಿಗಳ ಚೇಂಬರ್, ಸಿವಿಲ್ ಸ್ಟೇಷನ್ ಸಂಕೀರ್ಣದಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳಿಗೆ ಮತ್ತು ಹಲವು ನಗರ ಪ್ರದೇಶಗಳಿಗೆ ಭೇಟಿ ನೀಡಿ ಹಸಿರು ಸಂದೇಶ ಸಾರಲಾಯಿತು.
ಸ್ಥಳೀಯಾಡಳಿತ ವಿಭಾಗ ಜಂಟಿ ನಿರ್ದೇಶಕ ಕೆ.ವಿ.ಹರಿದಾಸ್, ಜಿಲ್ಲಾ ಶುಚಿತ್ವ ಮಿಷನ್ ಸಂಯೋಜಕ ಪಿ.ಜಯನ್, ಎಲ್‌ಎಸ್‌ಜಿಡಿ ಸಹಾಯಕ ನಿರ್ದೇಶಕ ಜೋಸೆಫ್ ಚಾಕೋ, ಜಿಪಂ ಕಾರ್ಯದರ್ಶಿಎಸ್.ಬಿಜು, ಜಾರಿ ತಂಡದ ಮುಖ್ಯಸ್ಥ ಮುಹಮ್ಮದ್ ಮದನಿ, ಲೈಫ್ ಮಿಷನ್ ಜಿಲ್ಲಾ ಸಂಯೋಜಕ ವಲ್ಸನ್, ಬಿಆರ್‌ಡಿಸಿ ವ್ಯವಸ್ಥಾಪಕ ಪ್ರಸಾದ್, ಕಿರಿಯ ಅಧೀಕ್ಷಕ ಲೋಕೇಶ್ ಎಂ.ಬಿ.ಆಚಾರ್ಯ ಉಪಸ್ಥಿತರಿದ್ದರು. ಮಾವೇಲಿ ವೇಷಧಾರಿಯನ್ನೊಳಗೊಂಡ ಯಾತ್ರೆ ಸಂಜೆ ಚೆರುವತ್ತೂರಿನಲ್ಲಿ ಸಮಾರೋಪಗೊಂಡಿತು.