ಮಟ್ಟು ಗ್ರಾಮದ ಗುಳ್ಳಕ್ಕೆ ವಿಶೇಷ ಸ್ಥಾನಮಾನ

ಉಡುಪಿಯಲ್ಲಿ ಮಟ್ಟು ಗ್ರಾಮದ ಗುಳ್ಳ ಬೆಳೆಗಾರರ ಹಸಿರು ಹೊರೆಕಾಣಿಕೆಯ ಮೆರವಣಿಗೆಗೆ ಸುಪ್ರಸಾದ್​ ಶೆಟ್ಟಿ ಚಾಲನೆ ನೀಡಿದರು. ಡಾ. ಟಿ.ಎಸ್​. ರಾವ್​, ಪ್ರದೀಪ್​ ರಾವ್​, ವಿಷ್ಣುಪ್ರಸಾದ್​ ಪಾಡೀಗಾರ್​, ಸುನೀಲ್​ ಬಂಗೇರ, ಸರಸ್ವತಿ ಬಂಗೇರ, ಮಟ್ಟು ಲಕ್ಷ್ಮೀನಾರಾಯಣ ರಾವ್​ ಇತರರಿದ್ದರು.
ಉಡುಪಿಯಲ್ಲಿ ಮಟ್ಟು ಗ್ರಾಮದ ಗುಳ್ಳ ಬೆಳೆಗಾರರ ಹಸಿರು ಹೊರೆಕಾಣಿಕೆಯ ಮೆರವಣಿಗೆಗೆ ಸುಪ್ರಸಾದ್​ ಶೆಟ್ಟಿ ಚಾಲನೆ ನೀಡಿದರು. ಡಾ. ಟಿ.ಎಸ್​. ರಾವ್​, ಪ್ರದೀಪ್​ ರಾವ್​, ವಿಷ್ಣುಪ್ರಸಾದ್​ ಪಾಡೀಗಾರ್​, ಸುನೀಲ್​ ಬಂಗೇರ, ಸರಸ್ವತಿ ಬಂಗೇರ, ಮಟ್ಟು ಲಕ್ಷ್ಮೀನಾರಾಯಣ ರಾವ್​ ಇತರರಿದ್ದರು.
Published on

* ಸುಪ್ರಸಾದ್​ ಶೆಟ್ಟಿ ಬೈಕಾಡಿ ಮಾಹಿತಿ

* ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮತ್ತು ಮಟ್ಟು ಗ್ರಾಮದ ಗುಳ್ಳ (ಬದನೆಕಾಯಿ)ಕ್ಕೆ ಅವಿನಾಭಾವ ಸಂಬಂಧವಿದೆ. ಸೋದೆ ಮಠದ ವಾದಿರಾಜ ತೀರ್ಥ ಶ್ರೀಪಾದರು ಅನುಗ್ರಹಿಸಿ ನೀಡಿದ ಬೀಜದಿಂದ ಹುಟ್ಟಿಕೊಂಡ ಗುಳ್ಳ ಇಂದು ದೇಶದಲ್ಲಿಯೇ ಜಿಐ ಪೇಟೆಂಟ್​ ಗಳಿಸಿದ ಪ್ರಥಮ ತರಕಾರಿ ಎಂಬ ಖ್ಯಾತಿಯನ್ನೂ ಗಳಿಸಿದೆ. ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ನಿತ್ಯವೂ ನೀಡುವ ಪ್ರಸಾದ ಭೋಜನದಲ್ಲಿ ಪದಾರ್ಥಕ್ಕೆ ಬಳಸುವ ತರಕಾರಿಗಳಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಸ್ಥಾನವಿದೆ ಎಂದು ಶೀರೂರು ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್​ ಶೆಟ್ಟಿ ಬೈಕಾಡಿ ತಿಳಿಸಿದರು.
ಉಡುಪಿ ನಗರದಲ್ಲಿರುವ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಉಡುಪಿ ತಾಲೂಕಿನ ಮಟ್ಟು ಗ್ರಾಮದ ಮಟ್ಟು ಗುಳ್ಳ ಬೆಳೆಗಾರರ ಸಂಘ ಉಡುಪಿ (ರಿ.) ವತಿಯಿಂದ ಶೀರೂರು ಪರ್ಯಾಯ ಮಹೋತ್ಸವಕ್ಕೆ ಹಸಿರು ಹೊರೆಕಾಣಿಕೆಯಾಗಿ ನೀಡಿದ ಗುಳ್ಳಗಳಿರುವ ನೂರಾರು ಬುಟ್ಟಿಗಳ ಮೆರವಣಿಗೆಗೆ ಶನಿವಾರ (ಜ.17) ಚಾಲನೆ ನೀಡಿ ಮಾತನಾಡಿದರು.   
ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಗುಳ್ಳ ಬೆಳೆಗಾರರು, ಭಕ್ತರು, ಡಾ. ಟಿ.ಎಸ್​. ರಾವ್​, ಪ್ರದೀಪ್​ ರಾವ್​, ವಿಷ್ಣುಪ್ರಸಾದ್​ ಪಾಡೀಗಾರ್​, ಸುನೀಲ್​ ಬಂಗೇರ, ಸರಸ್ವತಿ ಬಂಗೇರ, ಮಟ್ಟು ಲಕ್ಷ್ಮೀನಾರಾಯಣ ರಾವ್​, ಶ್ರೀಕಾಂತ್​ ಉಪಾಧ್ಯಾಯ, ಸಂದೀಪ್​ ಮಂಜ, ನರೇಶ್​ ಪಾಲನ್​, ಸದಾನಂದ ಸುವರ್ಣ, ಜಯಾ ಪೂಜಾರಿ, ಎಂ.ಲಕ್ಷ್ಮಣ ಇನ್ನಿತರರು ಉಪಸ್ಥಿತರಿದ್ದರು. 

ತಲೆಯ ಮೇಲೆ ಹೊತ್ತು ಸಾಗಿದ ಭಕ್ತರು

ಗುಳ್ಳ ಬೆಳೆಗಾರರು ಹಾಗೂ ಗ್ರಾಮದ ಮಹಿಳೆಯರು ಗುಳ್ಳ ಇರುವ ಬುಟ್ಟಿಯನ್ನು ಹೊತ್ತು ಶೀರೂರು ಮಠಕ್ಕೆ ಆಗಮಿಸಿ, ಪಟ್ಟದ ದೇವರಾದ ಸತ್ಯಭಾಮಾ-ರುಕ್ಮಿಣಿ ಸಹಿತ ವಿಠ್ಠಲ ದೇವರ ಸಮ್ಮುಖದಲ್ಲಿ ಇಟ್ಟರು. ಈ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಅವರು ಮಟ್ಟು ಭಕ್ತರನ್ನು ಸ್ವಾಗತಿಸಿದರು. ಬಳಿಕ ಶೀರೂರು ಮಠದಿಂದ ಮತ್ತೆ ಅವುಗಳನ್ನು ಹೊತ್ತು, ಶ್ರೀಕೃಷ್ಣ ಮಠದ ಮುಂಭಾಗದಿಂದ ರಥಬೀದಿ ಮಾರ್ಗದಲ್ಲಿ 'ಅನ್ನ ವಿಠ್ಠಲ' ಉಗ್ರಾಣಕ್ಕೆ ಸಾಗಿಸಿದರು.
"

ಶೀರೂರು ಪರ್ಯಾಯದ ನಿಮಿತ್ತ ಜ.10ರಿಂದ ಆರಂಭಗೊಂಡಿದ್ದ ಹಸಿರು ಹೊರೆಕಾಣಿಕೆ ಸಮರ್ಪಣೆಯ ಎಂಟು ದಿನದ ಅಭಿಯಾನ ಅಂತ್ಯಗೊಂಡಿದೆ. ಅಪಾರ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಸಿದ ಎಲ್ಲರಿಗೂ ವೇದವರ್ಧನ ಶ್ರೀಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಹೊರೆಕಾಣಿಕೆ ಸಲ್ಲಿಸಲು ಇಚ್ಛೆ ಇರುವ ಶ್ರೀಕೃಷ್ಣನ ಭಕ್ತರು 'ಅನ್ನ ವಿಠ್ಠಲ' ಉಗ್ರಾಣಕ್ಕೆ ಇನ್ನೆರಡು ದಿನ ನೇರವಾಗಿ ತಂದು ಸಮರ್ಪಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net