ಸರ್ಕಾರದ ದಲಿತ ವಿರೋಧಿ ನಡೆ ಖಂಡನೀಯ

 ಪುಣಚ ಗ್ರಾಮದ 3 ನೇ ವಾರ್ಡಿನ ದೇವಿನಗರದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಕುಟುಂಬಗಳು ಹಕ್ಕುಪತ್ರಕ್ಕೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲ ನೀಡಿದರು. ಸತೀಶ್ ಕುಂಪಲ, ಸುಲೋಚನಾ ಜಿ.ಕೆ.ಭಟ್, ಆರ್.ಚೆನ್ನಪ್ಪ ಕೋಟ್ಯಾನ್ ಮತ್ತಿತರರಿದ್ದರು.
ಪುಣಚ ಗ್ರಾಮದ 3 ನೇ ವಾರ್ಡಿನ ದೇವಿನಗರದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಕುಟುಂಬಗಳು ಹಕ್ಕುಪತ್ರಕ್ಕೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲ ನೀಡಿದರು. ಸತೀಶ್ ಕುಂಪಲ, ಸುಲೋಚನಾ ಜಿ.ಕೆ.ಭಟ್, ಆರ್.ಚೆನ್ನಪ್ಪ ಕೋಟ್ಯಾನ್ ಮತ್ತಿತರರಿದ್ದರು.
Published on
ಬಂಟ್ವಾಳ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ 3ನೇ ವಾರ್ಡಿನ ದೇವಿನಗರದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗಿಯಾದರು.
ಕುಟುಂಬ ಸದಸ್ಯರು ತಾಲೂಕು ಆಡಳಿತ ಸೌಧದ ಮೆಟ್ಟಿಲಿನಲ್ಲಿ ಕುಳಿತು ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು, ಬಂಟ್ವಾಳ ಮಂಡಲದ ಬಿಜೆಪಿ ಕಾರ್ಯಕರ್ತರು ಜತೆಗೂಡಿ ಬಡವರ ಶೋಷಣೆ ಮಾಡುತ್ತಿರುವ ಸರ್ಕಾರ ಹಾಗೂ ಪುತ್ತೂರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮನೆಯ ಹಕ್ಕುಪತ್ರಗಳನ್ನು ನೀಡದೆ ಸತಾಯಿಸುತ್ತಿರುವ ಶಾಸಕ ಅಶೋಕ್ ರೈ ಮತ್ತು ದಲಿತ ವಿರೋಧಿ ಸರ್ಕಾರದ ನಡೆ ಅತ್ಯಂತ ಖಂಡನೀಯ. ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಅವರ ಜತೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪ್ರಮುಖ ನಾಯಕರಾದ ಸುಲೋಚನಾ ಜಿ.ಕೆ.ಭಟ್, ಆರ್.ಚೆನ್ನಪ್ಪ ಕೋಟ್ಯಾನ್, ದಯಾನಂದ ಶೆಟ್ಟಿ, ಪಿ.ಬಿ.ಶಿವಕುಮಾರ್, ಜಗದೀಶ್ ಆಳ್ವ, ಪ್ರೇಮಾನಂದ ಶೆಟ್ಟಿ, ರಾಮದಾಸ್, ವಿಕಾಸ್ ಪುತ್ತೂರು, ಮಾಧವ ಮಾವೆ, ಶಿವಪ್ರಸಾದ್ ಶೆಟ್ಟಿ, ಸನ್ನ ಮಾಡ್ತಾ, ಮುರಳಿಕೃಷ್ಣ, ದಿನೇಶ್ ಅಮ್ಟೂರು, ಎ.ಗೋವಿಂದ ಪ್ರಭು, ದೇವಪ್ಪ ಪೂಜಾರಿ, ಮಂಜುಳಾ ರಾವ್, ಸುಮಿತ್ರಾ ಕರಿಯ, ಸುದರ್ಶನ್ ಬಜ, ಹರೀಶ್ ಬಿಜೆತ್ರೆ, ಹರೀಶ್ ಪಡು, ಪುರುಷೋತ್ತಮ ಸಾಲ್ಯಾನ್, ಯಶೋಧರ, ದಯಾನಂದ, ಮಹೇಶ್ ಜೋಗಿ, ಪ್ರಭಾಕರ ಪ್ರಭು, ವಸಂತ ಅಣ್ಣಳಿಕೆ ಇದ್ದರು.

ಸಿದ್ದರಾಮಯ್ಯ ಸರ್ಕಾರ ಮೂರು ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಆಡಳಿತ ಸೌಧದ ಮುಂದೆ ಬಂದು ಕೈ ಚಾಚುವಂಥ ದಯಾನೀಯ ಸ್ಥಿತಿಗೆ ರಾಜ್ಯ ತಲುಪಿರುವುದು ನಾಚಿಕೇಡು ಹಾಗೂ ಅತ್ಯಂತ ಖಂಡನೀಯ ಸಂಗತಿ.

— ಕ್ಯಾ.ಬ್ರಿಜೇಶ್ ಚೌಟ, ಸಂಸದ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net