ಬೆಂಗಳೂರಿಗೆ ಸರ್ಕಾರಿ ಸಾರಿಗೆ ಪ್ರಯಾಣ ದರ ಕಡಿತ

((ಸಾಂದರ್ಭಿಕ ಚಿತ್ರ))
((ಸಾಂದರ್ಭಿಕ ಚಿತ್ರ))
Published on

* ಶೇ.10ರಿಂದ 15ರ ವರೆಗೆ ಟಿಕೆಟ್​ ದರ ಇಳಿಕೆ

* ಕುಂದಾಪುರ, ಉಡುಪಿ, ಮಂಗಳೂರಿನಿಂದ 

ಉಡುಪಿ: ಕ.ರಾ.ರ.ಸಾ. ನಿಗಮದ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿವಿಧ ಮಾದರಿಯ ವಿಶೇಷ ಬಸ್​ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜ.5ರಿಂದಲೇ ಅನ್ವಯಿಸಿ ಶೇ.10ರಿಂದ 15ರ ವರೆಗೆ ಟಿಕೆಟ್​ ದರದಲ್ಲಿ ಕಡಿತ ಮಾಡಲಾಗಿದೆ.
ಕುಂದಾಪುರದಿಂದ ಬೆಂಗಳೂರಿಗೆ ಅಂಬಾರಿ ಬಸ್​ಗೆ 1,510 ರೂ., ಡ್ರೀಮ್​ ಕ್ಲಾಸ್​ ಬಸ್​ 1,350 ರೂ., ಮಲ್ಟಿ ಆಕ್ಸಿಲ್​ 2.0 ಬಸ್​ 1,310 ರೂ., ಮಲ್ಟಿ ಆಕ್ಸಿಲ್​ 1,110 ರೂ., ನಾನ್​ ಎಸಿ ಸ್ಲೀಪರ್​ 1,050 ರೂ., ಪಲ್ಲಕ್ಕಿ ನಾನ್​ ಎಸಿ ಸ್ಲೀಪರ್​ 1,100 ರೂ. ಹಾಗೂ ರಾಜಹಂಸ 750 ರೂ.
ಉಡುಪಿಯಿಂದ ಬೆಂಗಳೂರಿಗೆ ಅಂಬಾರಿ ಬಸ್​ಗೆ 1,460 ರೂ., ಡ್ರೀಮ್​ ಕ್ಲಾಸ್​ 1,300 ರೂ., ಮಲ್ಟಿ ಆಕ್ಸಿಲ್​ 2.0 ಬಸ್​ 1,250 ರೂ., ಮಲ್ಟಿ ಆಕ್ಸಿಲ್​ 1,060 ರೂ., ನಾನ್​ ಎಸಿ ಸ್ಲೀಪರ್​ 1,000 ರೂ., ಪಲ್ಲಕ್ಕಿ ನಾನ್​ ಎಸಿ ಸ್ಲೀಪರ್​ 1,060 ರೂ. ಹಾಗೂ ರಾಜಹಂಸ 700 ರೂ.
ಮಂಗಳೂರಿನಿಂದ ಬೆಂಗಳೂರಿಗೆ ಅಂಬಾರಿ ಬಸ್​ಗೆ 1,350 ರೂ., ಡ್ರೀಮ್​ ಕ್ಲಾಸ್​ 1,200 ರೂ., ಮಲ್ಟಿ ಆಕ್ಸಿಲ್​ 2.0 ಬಸ್​ 1,150 ರೂ., ಮಲ್ಟಿ ಆಕ್ಸಿಲ್​ 1,000 ರೂ., ನಾನ್​ ಎಸಿ ಸ್ಲೀಪರ್​ 900 ರೂ., ಪಲ್ಲಕ್ಕಿ ನಾನ್​ ಎಸಿ ಸ್ಲೀಪರ್​ 950 ರೂ. ಹಾಗೂ ರಾಜಹಂಸ 650 ರೂ. ದರ ನಿಗದಿಸಲಾಗಿದೆ. ಬೆಂಗಳೂರಿನಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿಗೆ ಮರಳಿ ಬರುವಾಗಲೂ ಸಹ ಅದೇ ದರ ಇರಲಿದೆ ಎಂದು ಮಂಗಳೂರು ಕ.ರಾ.ರ.ಸಾ. ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net