ರಾಜಕೀಯ ಪಕ್ಷದ ಕಚೇರಿಗೆ ಸರ್ಕಾರಿ ಜಾಗ!

ಕುಂದಾಪುರದಲ್ಲಿ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿ ಕಾಂಗ್ರೆಸ್​ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕುಂದಾಪುರ ಶಾಸಿ ಸರ್ಕಲ್​ ಬಳಿ ಪ್ರತಿಭಟನೆ ನಡೆಯಿತು. ಪ್ರಮುಖರಾದ ನವೀನ್​ ಶೆಟ್ಟಿ, ಶಂಕರ, ರಾಜೇಶ ಕಾವೇರಿ ಮತ್ತಿತರರಿದ್ದರು.
ಕುಂದಾಪುರದಲ್ಲಿ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿ ಕಾಂಗ್ರೆಸ್​ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕುಂದಾಪುರ ಶಾಸಿ ಸರ್ಕಲ್​ ಬಳಿ ಪ್ರತಿಭಟನೆ ನಡೆಯಿತು. ಪ್ರಮುಖರಾದ ನವೀನ್​ ಶೆಟ್ಟಿ, ಶಂಕರ, ರಾಜೇಶ ಕಾವೇರಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾರ್ಕಿಂಗ್​ ವ್ಯವಸ್ಥೆ
  • ಸರ್ಕಾರಿ ಜಾಗ
  • ಪ್ರತಿಭಟನೆ
ಕುಂದಾಪುರ: ನಗರದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಸಮಸ್ಯೆಯಲ್ಲಿದ್ದು, ಬಹುಮಹಡಿ ಆಧಾರದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡುವ ಬಗ್ಗೆ ಮತ್ತು ಕುಂದಾಪುರ ನಗರದಲ್ಲಿ ಅಗ್ನಿಶಾಮಕ ದಳ ಕೇಂದ್ರ ಸ್ಥಾಪನೆಗೆ ಗುರುತಿಸಿದ ಜಾಗವನ್ನು ರಾಜಕೀಯ ಪಕ್ಷವೊಂದರ ಕಚೇರಿಗೆ ಉಪಯೋಗಕ್ಕೆ ನೀಡಿರುವುದು ಖಂಡನೀಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಕುಂದಾಪುರದಲ್ಲಿ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿ ಕಾಂಗ್ರೆಸ್​ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಭಾರತೀಯ ಜನತಾ ಪಕ್ಷ ಕುಂದಾಪುರ ಮಂಡಲ ವತಿಯಿಂದ ಕುಂದಾಪುರ ಶಾಸಿ ಸರ್ಕಲ್​ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಶಾಸಕ ಎ.ಕಿರಣ್​ ಕುಮಾರ್​ ಕೊಡ್ಗಿ ಮಾತನಾಡಿ, ನಗರ ಭಾಗದಲ್ಲಿ 0.11 ಎಕರೆ ಜಮೀನನ್ನು ಕಾಂಗ್ರೆಸ್​ ಭವನ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಕಾಂಗ್ರೆಸ್​ ಭವನ ಟ್ರಸ್ಟ್​ ಬೆಂಗಳೂರು ಹೆಸರಿನಲ್ಲಿ ಮಂಜೂರು ಮಾಡಿರುವ ಆದೇಶ ರದ್ದು ಪಡಿಸಿ ಸಾರ್ವಜನಿಕ ನ್ಯಾಯ ಒದಗಿಸಬೇಕು ಎಂದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ್​ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜೇಶ ಕಾವೇರಿ, ಬಿಜೆಪಿ ಮುಖಂಡರಾದ ಸುರೇಶ ಶೆಟ್ಟಿ, ಶ್ರೀಕಾಂತ ನಾಯಕ್​, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವೀರಾಜ್​ ಶೆಟ್ಟಿ, ವಿಟ್ಠಲ ಪೂಜಾರಿ, ಸುನೀಲ್​ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ಮೋಹನದಾಸ ಶೆಣೈ, ಪ್ರಭಾಕರ ವಿ., ಗುಣರತ್ನಾ, ಅಶೋಕ ಪೂಜಾರಿ, ಭಾಸ್ಕರ ಬಿಲ್ಲವ, ಸುಧೀರ ಕೆ.ಎಸ್​., ಸತೀಶ ಪೂಜಾರಿ ಪಾಲ್ಗೊಂಡಿದ್ದರು.
ಬಳಿಕ ಕುಂದಾಪುರ ತಹಸೀಲ್ದಾರ್​ ಪ್ರದಿಪ್​ ಕುರ್ಡೇಕರ್​ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net