ಆರ್ಥಿಕ ಸ್ವಾವಲಂಬನೆಗೆ ಸರ್ಕಾರಿ ಸೌಲಭ್ಯ ಸಹಕಾರಿ

 ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಶಾಸಕ ಹರೀಶ್ ಪೂಂಜ ವಿವಿಧ ಸೌಲಭ್ಯ ವಿತರಿಸಿದರು. ಮಂಜುನಾಥ, ಮಂಜು ಮೊದಲಾದವರು ಇದ್ದರು.
ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಶಾಸಕ ಹರೀಶ್ ಪೂಂಜ ವಿವಿಧ ಸೌಲಭ್ಯ ವಿತರಿಸಿದರು. ಮಂಜುನಾಥ, ಮಂಜು ಮೊದಲಾದವರು ಇದ್ದರು.
Published on
ಬೆಳ್ತಂಗಡಿ: ವೃತ್ತಿ ಬದುಕು ನಡೆಸುತ್ತಿರುವವರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ತಲುಪಿಸುವ ಕಾರ್ಯವನ್ನು ಬೆಳ್ತಂಗಡಿಯಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ಸರ್ಕಾರದ ಎಲ್ಲ ಯೋಜನೆ ಪಾರದರ್ಶಕವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮುಂದುವರಿಸಲಾಗುವುದು. ವಿತರಿಸಲಾದ ಸಲಕರಣೆಗಳು ಫಲಾನುಭವಿಗಳ ಬದುಕಿಗೆ ಶಕ್ತಿಯಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದಕ್ಷಿಣ ಕನ್ನಡ ಜಿಪಂ ಗ್ರಾಮೀಣ ಕೈಗಾರಿಕಾ ವಿಭಾಗ ಮಂಗಳೂರು ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಬೆಳ್ತಂಗಡಿಯಲ್ಲಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಪಂ ಗ್ರಾಮೀಣ ಕೈಗಾರಿಕಾ ವಿಭಾಗದ ಉಪನಿರ್ದೇಶಕ ಮಂಜುನಾಥ ಇಲಾಖೆಯಿಂದ ದೊರೆಯುವ ವಿವಿಧ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿ ಮಂಜು ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಜಿಪಂ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಗಾರೆ ಕೆಲಸಕ್ಕೆ 50, ಬಡಗಿ ವೃತ್ತಿಗೆ 19, ಹೊಲಿಗೆ ಯಂತ್ರ 77, ಇಲೆಕ್ಟ್ರಾನಿಕ್ ಉಪಕರಣ 19, ಕಮ್ಮಾರಿಕೆಗೆ 6 ಹಾಗೂ ಅಕ್ಕಸಾಲಿಗರಿಗೆ 21 ಸೇರಿದಂತೆ ಒಟ್ಟು 192 ಫಲಾನುಭವಿಗಳಿಗೆ ವಿವಿಧ ವೃತ್ತಿ ಆಧಾರಿತ ಸಲಕರಣೆ ವಿತರಿಸಲಾಯಿತು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 20 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net