

ಉಡುಪಿ ಜಿಲ್ಲೆಯಲ್ಲೂ ವೈದ್ಯರು ಮುಷ್ಕರ ನಡೆಸಲಿದ್ದಾರೆ. ಈ ಮುಷ್ಕರವು ಬಡ ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲೆಂದೇ ಮಾಡಲಾಗುತ್ತಿದೆ. ವೈದ್ಯರು ಆಸ್ಪತ್ರೆಗೆ ಬರಲಿದ್ದು, ಯಾವುದೇ ತಪಾಸಣೆ ಅಥವಾ ನಿಗದಿತ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಒಪಿಡಿ ಸೇವೆ ಬಂದ್ ಇರಲಿದೆ. ಆದರೆ, ತುರ್ತು ಪರಿಸ್ಥಿತಿ, ಅಪಘಾತ ಪ್ರಕರಣ, ಜನರ ಜೀವಕ್ಕೆ ಅಪಾಯವಿರುವ ಪ್ರಕರಣಗಳನ್ನು ನಿಭಾಯಿಸಲಿದ್ದಾರೆ.