ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆ

ಕರ್ಕುಂಜೆ ಗ್ರಾಮದ ಕುಂಟನೆರಳು ಎಂಬಲ್ಲಿನ ಮುತ್ತು ಎಂಬುವರ ಮನೆ ಮೇಲೆ ಮರ ಬಿದ್ದಿದೆ.
ಕರ್ಕುಂಜೆ ಗ್ರಾಮದ ಕುಂಟನೆರಳು ಎಂಬಲ್ಲಿನ ಮುತ್ತು ಎಂಬುವರ ಮನೆ ಮೇಲೆ ಮರ ಬಿದ್ದಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ತಾಲೂಕಿನಾದ್ಯಂತ ಶನಿವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಲ, ಗದ್ದೆಗಳಲ್ಲಿ ನೀರಿನ ಪ್ರವಾಣ ಹೆಚ್ಚಳವಾಗಿದ್ದು, ರೈತರು ನಾಟಿ ಕಾರ್ಯ ಚುರುಕುಗೊಳಿಸಿದ್ದಾರೆ. ಚರಂಡಿ ಹಾಗೂ ತೋಡುಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದೆ.
ಹಲವೆಡೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕುಂದಾಪುರ ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅನೇಕ ಕಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಹಲವೆಡೆ ಕೃತಕ ನೆರೆ ಉಂಟಾಗಿದೆ. ಗಾಳಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ.

ಅಂಪಾರು ಗ್ರಾಮದ ಪಾರ್ವತಿ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಹೆವ್ಮಾಡಿ ಗ್ರಾಮದ ಚಿಕ್ಕು ಎಂಬುವರ ವಾಸ್ತವ್ಯದ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ನಷ್ಟ ಉಂಟಾಗಿದೆ. ಕುಂದಾಪುರ ಕೋಡಿ ಎಂಬಲ್ಲಿ ಇಬ್ರಾಹಿಂ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ.
ಕರ್ಕುಂಜೆ ಗ್ರಾಮದ ವಾವಿನಕಟ್ಟೆ ಎಂಬಲ್ಲಿ ಹಾಜಿರಾ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಗಣಪು ಮೊಗವೀರ ಎಂಬುವರ ಮನೆ, ಕರ್ಕುಂಜೆ ಗ್ರಾಮದ ಕುಂಟನೆರಳು ಎಂಬಲ್ಲಿನ ಮುತ್ತು ಎಂಬುವರ ಮನೆ, ಸಿದ್ದಾಪುರ ಗ್ರಾಮದ ಪುಷ್ಪಾ, ಸಂಜೀವಿ ಶೆಡ್ತಿ, ಪ್ರೇಮಾ ಹಾಗೂ ಜ್ಯೋತಿ ಎಂಬುವರ ಮನೆಗಳಿಗೆ ಹಾನಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net