ಕ್ರೀಡೆಯಿಂದ ಉತ್ತಮ ಆರೋಗ್ಯ, ಮನರಂಜನೆ

 ಉಪ್ಪುಂದ ದೇವಾಡಿಗರ ಸಂಘದ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟವನ್ನು ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ವಂಡ್ಸೆ ರಮೇಶ್ ದೇವಾಡಿಗ ಉದ್ಘಾಟಿಸಿದರು.
ಉಪ್ಪುಂದ ದೇವಾಡಿಗರ ಸಂಘದ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟವನ್ನು ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ವಂಡ್ಸೆ ರಮೇಶ್ ದೇವಾಡಿಗ ಉದ್ಘಾಟಿಸಿದರು.
Published on
ಬೈಂದೂರು: ಕ್ರೀಡೆಯಿಂದ ಉತ್ತಮ ಆರೋಗ್ಯ, ಮನರಂಜನೆ ಹಾಗೂ ಯಶಸ್ಸು ಸಿಗುತ್ತದೆ. ಜತೆಗೆ ತಾಳ್ಮೆ, ಇತರರೊಂದಿಗೆ ಉತ್ತಮ ಬಾಂಧವ್ಯ ಹಾಗೂ ನಿಕಟ ಸಂಪರ್ಕದಿಂದ ನಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ನಿರ್ಮಾಣವಾಗುತ್ತದೆ. ಇಂತಹ ಕ್ರೀಡಾಕೂಟಗಳಿಂದ ಸಮುದಾಯದ ಸದಸ್ಯರ ಪರಸ್ಪರ ಪರಿಚಯ ಹಾಗೂ ಆತ್ಮೀಯ ಒಡನಾಟದ ಮೂಲಕ ಸಂಭ್ರಮಿಸಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ವಂಡ್ಸೆ ರಮೇಶ್ ದೇವಾಡಿಗ ಹೇಳಿದರು.
ಬಿಜೂರು ಗ್ರಾಮದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಉಪ್ಪುಂದ ದೇವಾಡಿಗರ ಸಂಘದ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷ ಎಚ್.ರವೀಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ದೊರೆತಂತಾಗಿದೆ ಎಂದರು.
ಉದ್ಯಮಿ ನಂದೀಶ್ ದೇವಾಡಿಗ, ಶಿಕ್ಷಣ ಸಂಯೋಜಕ ಯೋಗೀಶ್ ದೇವಾಡಿಗ, ಬಿಜೂರು ಮಠದಮನೆ ಕೃಷ್ಣಮೂರ್ತಿ ದೇವಾಡಿಗ, ನಾಗೂರು ಉದ್ಯಮಿ ಈಶ್ವರ ದೇವಾಡಿಗ, ಉಪ್ಪುಂದದ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಕೇಶವ ದೇವಾಡಿಗ ಮಾತನಾಡಿದರು.
ನರಸಿಂಹ ದೇವಾಡಿಗ ನಿರೂಪಿಸಿದರು. ದೇವರಾಯ ದೇವಾಡಿಗ ಸ್ವಾಗತಿಸಿದರು. ಪುರುಷೋತ್ತಮದಾಸ್ ವಂದಿಸಿದರು. ದಶಮಾನೋತ್ಸವದ ಅಂಗವಾಗಿ ನಡೆದ ಈ ಕ್ರೀಡಾಕೂಟದಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net