ನಿರಂತರ ಪ್ರಯತ್ನ, ಏಕಾಗ್ರತೆಯಿಂದ ಉತ್ತಮ ಸಾಧನೆ

ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶಂ ಕಾರ್ಯಕ್ರಮ ನಡೆಯಿತು. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಸಂಯೋಜಕ ಪ್ರೊ.ಶಶಿಶೇಖರ್ ಕಾಕತ್ಕಾರ್ ಮೊದಲಾದವರಿದ್ದರು.
ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶಂ ಕಾರ್ಯಕ್ರಮ ನಡೆಯಿತು. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಸಂಯೋಜಕ ಪ್ರೊ.ಶಶಿಶೇಖರ್ ಕಾಕತ್ಕಾರ್ ಮೊದಲಾದವರಿದ್ದರು.
Published on
ಬೆಳ್ತಂಗಡಿ: ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ನಿರಂತರ ಪ್ರಯತ್ನ ಮತ್ತು ಏಕಾಗ್ರತೆಯ ಜತೆಗೆ ಪಾಲಕರ ಪ್ರೋತ್ಸಾಹ ಹಾಗೂ ಗುರು ಹಿರಿಯರ ಮಾರ್ಗದರ್ಶನವಿರುತ್ತದೆ. ನಕಾರಾತ್ಮಕ ಚಿಂತನೆಗಳಿಗೆ ತಲೆಕೊಡದೆ ಸಕಾರಾತ್ಮಕ ಯೋಚನೆ ಮತ್ತು ಯೋಜನೆಗಳಿಂದ ಯಶಸ್ಸು ಸಾಧಿಸಿದಾಗ ಸಂಘ-ಸಂಸ್ಥೆಗಳು, ಸಮಾಜ ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವತಿಯಿಂದ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ‘ಪ್ರವೇಶಂ 2026-27’ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರಶಿಕ್ಷಣ ಸಮಾರಂಭದಲ್ಲಿ ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ.ಶಶಿಶೇಖರ್ ಕಾಕತ್ಕಾರ್ ಉದ್ಘಾಟಿಸಿದರು. ಪ್ರಾಧ್ಯಾಪಕ ಅಬ್ದುಲ್ ರಜಾಕ್ ಅನಂತಾಡಿ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ. ಸ್ವಾಗತಿಸಿದರು. ಉಪನ್ಯಾಸಕ ಡಾ.ಮಹಾವೀರ ಜೈನ್ ನಿರೂಪಿಸಿದರು. ಉಪನ್ಯಾಸಕ ತಿರುಮಲೇಶ್ ವಂದಿಸಿದರು.

ರ‌್ಯಾಂಕ್ ವಿಜೇತರಿಗೆ ಸನ್ಮಾನ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ‌್ಯಾಂಕ್ ಪಡೆದ 7 ವಿದ್ಯಾರ್ಥಿಳನ್ನು ಸನ್ಮಾನಿಸಲಾಯಿತು. ಕಲಾ ವಿಭಾಗದಲ್ಲಿ 2ನೇ ರ‌್ಯಾಂಕ್ ಪಡೆದ ನಿಜಾ ಕುಲಾಲ್, 9ನೇ ಸ್ಥಾನ ಪಡೆದ ಶ್ರೀಪೂರ್ಣ ಗಬ್ಲಡ್ಕ, ವಾಣಿಜ್ಯ ವಿಭಾಗದಲ್ಲಿ 6ನೇ ಸ್ಥಾನ ಪಡೆದ ಹಂಸಿನಿ ಭಿಡೆ, 8ನೇ ಸ್ಥಾನ ಪಡೆದ ಅರ್ಪಿತಾ ಅಡಿಗ, 9ನೇ ಸ್ಥಾನ ಪಡೆದ ಅಂಶುಲಾ ಶ್ರೇಷ್ಠ, 10ನೇ ಸ್ಥಾನ ಪಡೆದ ರಾಮಚರಣ್ ಎಸ್., ವಿಜ್ಞಾನ ವಿಭಾಗದಲ್ಲಿ 9ನೇ ಸ್ಥಾನ ಪಡೆದ ಅಂಕಿತಾ ಅವರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net