'ಪಾರ್ಥ ಸಾರಥಿ' ರಥಕ್ಕೆ ಚಿನ್ನದ ಕವಚ ಅಳವಡಿಕೆ

ಪಾರ್ಥ ಸಾರಥಿ ರಥಕ್ಕೆ ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಸುಗುಣೇಂದ್ರ ಶ್ರೀ ಚಾಲನೆ ನೀಡಿದರು. ಸುಶ್ರೀಂದ್ರ ಶ್ರೀ, ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಮುರಳೀಧರ್​ ಆಚಾರ್ಯ, ಗಂಜೀಫಾ ರಘುಪತಿ ಭಟ್​ ಇದ್ದರು.
ಪಾರ್ಥ ಸಾರಥಿ ರಥಕ್ಕೆ ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಸುಗುಣೇಂದ್ರ ಶ್ರೀ ಚಾಲನೆ ನೀಡಿದರು. ಸುಶ್ರೀಂದ್ರ ಶ್ರೀ, ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಮುರಳೀಧರ್​ ಆಚಾರ್ಯ, ಗಂಜೀಫಾ ರಘುಪತಿ ಭಟ್​ ಇದ್ದರು.
Published on

* ಹೊದಿಕೆ ಕಾರ್ಯಕ್ಕೆ ಸುಗುಣೇಂದ್ರ ಶ್ರೀ ಚಾಲನೆ 

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ ಹಾಗೂ ಆಶ್ರಮ ಸ್ವೀಕಾರ, ಪೀಠಾರೋಹಣದ ಸುವರ್ಣ ಮಹೋತ್ಸವದ ನಿಮಿತ್ತ ಉಡುಪಿ ಶ್ರೀಕೃಷ್ಣನಿಗೆ 'ಪಾರ್ಥ ಸಾರಥಿ' ಸ್ವರ್ಣ ಲೇಪಿತ ರಥ ಸಮರ್ಪಣೆಗೆ ಸಂಕಲ್ಪಿಸಿದ್ದಾರೆ.
ಭಕ್ತರ ಸಹಕಾರದೊಂದಿಗೆ ಇದೀಗ ರಥ ನಿರ್ಮಾಣಗೊಂಡಿದ್ದು, ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಜತೆಯಾಗಿ ಶುಕ್ರವಾರ (ಡಿ.19) ಚಾಲನೆ ನೀಡಿದರು.

ಉಡುಪಿ ಶ್ರೀಕೃಷ್ಣನಿಗೆ ಗಿಫ್ಟ್

 ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಜನ್ಮದಿನದ ಸಂದರ್ಭದಲ್ಲಿ, ವಿವಾಹ ಮಹೋತ್ಸವದಲ್ಲಿ ಅಥವಾ ಯಾವುದೇ ಶುಭಕರ ಕಾರ್ಯಕ್ರಮಗಳಲ್ಲಿ ಗಿಫ್ಟ್ (ಕೊಡುಗೆ) ನೀಡುತ್ತಾರೆ. ಅದೇ ರೀತಿಯಲ್ಲಿ ನಮ್ಮ ಆರಾಧ್ಯ ದೇವನಾದ ಮತ್ತು ನಮಗೆ ಅತ್ಯಂತ ಪ್ರಿಯನಾದ ಶ್ರೀಕೃಷ್ಣನಿಗೆ ಗಿಫ್ಟ್ ಕೊಡಬೇಕೆಂಬ ಸಂಕಲ್ಪ ಮಾಡಲಾಗಿತ್ತು. ಎಲ್ಲ ಭಕ್ತರ ಸಹಕಾರದಿಂದ ಅದು ಕಾರ್ಯಗತವಾಗಿದೆ. ಇದೇ ಡಿ.27ರಂದು ಸ್ವರ್ಣ ರಥವನ್ನು ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲಿದ್ದೇವೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ಮುರಳೀಧರ್​ ಆಚಾರ್ಯ ಹಾಗೂ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್​ ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net