ಕುಂದಾಪುರದ ಡಾ.ಶ್ರದ್ಧಾಗೆ ಚಿನ್ನದ ಪದಕ

ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಚಿನ್ನದ ಪದಕ ಗಳಿಸಿದ ಕುಂದಾಪುರ ಮೂಲದ ಡಾ.ಶ್ರದ್ಧಾ ಅವರನ್ನು ಗೌರವಿಸಲಾಯಿತು
ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಚಿನ್ನದ ಪದಕ ಗಳಿಸಿದ ಕುಂದಾಪುರ ಮೂಲದ ಡಾ.ಶ್ರದ್ಧಾ ಅವರನ್ನು ಗೌರವಿಸಲಾಯಿತು
Published on
ಕುಂದಾಪುರ: ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಚಿನ್ನದ ಪದಕ ಹಾಗೂ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ಕುಂದಾಪುರ ಮೂಲದ ಡಾ.ಶ್ರದ್ಧಾ ಅವರನ್ನು ಗೌರವಿಸಲಾಯಿತು.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ್ ವಿರೂಪಣ್ಣ ಪಾಟೀಲ್ ಪದಕ ಪ್ರದಾನ ಮಾಡಿದರು. ಕುಲಾಧಿಪತಿಗಳಾದ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇತರರು ಇದ್ದರು.
ಕೋಟೇಶ್ವರದ ಉದ್ಯಮಿ ಚಂದ್ರಶೇಖರ ರಾವ್ ಹಾಗೂ ಪದ್ಮಲತಾ ದಂಪತಿ ಪುತ್ರಿಯಾಗಿರುವ ಡಾ.ಶ್ರದ್ಧಾ, ಮಕ್ಕಳ ತಜ್ಞ ಡಾ.ಬಿ.ಲಕ್ಷ್ಮೀನಾರಾಯಣ ಅವರ ಪತ್ನಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net