ದೇವಳ ಜೀರ್ಣೋದ್ಧಾರ ಭಗವಂತನ ಸಂಕಲ್ಪ

 ಕಡೇಶಿವಾಲಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಪುನಃ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ, ಶಾಸಕ ರಾಜೇಶ್ ನಾಕ್ ಮೊದಲಾದವರು ಇದ್ದರು.
ಕಡೇಶಿವಾಲಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಪುನಃ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ, ಶಾಸಕ ರಾಜೇಶ್ ನಾಕ್ ಮೊದಲಾದವರು ಇದ್ದರು.
Published on
ಬಂಟ್ವಾಳ: ದೇವಾಲಯದ ಜೀರ್ಣೋದ್ಧಾರ ಎಂಬುವುದು ಮಾನವ ಸಂಕಲ್ಪವಲ್ಲ, ಅದು ದೇವರದ್ದೇ ಸಂಕಲ್ಪ. ದೇವರು ಸಂಕಲ್ಪ ತೊಟ್ಟಾಗ ಮಾನವರ ಮೂಲಕ ಅದು ಸುಸಾಂಗವಾಗಿ ನೆರವೇರುತ್ತದೆ. ಜೀರ್ಣೋದ್ಧಾರದ ಕಾರ್ಯ ನಮಗೆ ದೊರಕುವ ಬಹುದೊಡ್ಡ ಭಾಗ್ಯ ಎಂದು ಉಡುಪಿಯ ಸೋದೆ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಭವ್ಯ ದೇವಾಲಯದ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಪುನಃ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕಡೇಶಿವಾಲಯ ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಸುಮೋಧರ ಡಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ.ರಮಾನಾಥ ರೈ, ಕ್ಷೇತ್ರದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ವಾಸ್ತು ತಜ್ಞ ಶ್ರೀ ಕೃಷ್ಣರಾಜ ತಂತ್ರಿ, ಪ್ರಮುಖರಾದ ಕೆ.ಕೆ.ಶೆಟ್ಟಿ ಅಹಲ್ಯಾನಗರ ಎಂ.ಎಚ್., ರಾಘವೇಂದ್ರ ಎ., ರಘುನಾಥ್ ಸೋಮಯಾಜಿ, ಕೇಶವ ಪ್ರಸಾದ್ ಮುಳಿಯ, ಅಮರನಾಥ ಅಜಿಲ ಆರಿಕಲ್ಲು, ಕೃಷ್ಣಯ್ಯ ಬಲ್ಲಾಳ್, ಡಾ.ಶ್ರೀಪತಿ ರಾವ್ ದಾಳಿಂಬ, ನವೀನ್ ಕುಮಾರ್ ಎನ್., ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಿದಾನಂದ ಎಂ., ಈಶ್ವರ ಪೂಜಾರಿ, ಸತೀಶ್ಚಂದ್ರ ಶೆಟ್ಟಿ ಬಾವಗುತ್ತು, ಡಿ.ಸಂಜೀವ ಪೂಜಾರಿ, ಶೀನ ನಾಯ್ಕ, ಪ್ರೇಮಾ ಶಿವಪ್ರಸಾದ್ ಶೆಟ್ಟಿ, ಶ್ರುತಿ ಹರೀಶ್ಚಂದ್ರ ಉಪಸ್ಥಿತರಿದ್ದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಆರ್.ಶೆಟ್ಟಿ ಸ್ವಾಗತಿಸಿದರು. ಮೋಹನ್‌ದಾಸ್ ಕೆ.ರೈ ಪ್ರಸ್ತಾವಿಸಿದರು. ಹರಿಶ್ಚಂದ್ರ ಕಾಡಬೆಟ್ಟು ವಂದಿಸಿದರು. ಮೋಹನ್ ಕುಮಾರ್ ಕಡೇಶ್ವಾಲ್ಯ ನಿರೂಪಿಸಿದರು.

ಅತ್ಯಲ್ಪ ಕಾಲದಲ್ಲಿ ಜೀರ್ಣೋದ್ಧಾರಕ್ಕೆ ಅಣಿಯಾಗಿ ಈಗ ಸರ್ವರ ಪ್ರೀತಿ ಬೆಂಬಲ ಹಾಗೂ ದೇವರ ಅನುಗ್ರಹದಿಂದ ಕಾಮಗಾರಿಗೆ ವೇಗ ದೊರೆಯುತ್ತಿದೆ. ಸರ್ವರ ಆಶಯದಂತೆ ಸುಂದರವಾದ ದೇವಾಲಯ ಶೀಘ್ರ ಸಾಕಾರವಾಗಿ ಬ್ರಹ್ಮಕಲಶ ಕಾಣುವ ಸೌಭಾಗ್ಯ ನಮ್ಮದಾಗಲಿದೆ.

— ಕುಸುಮೋಧರ ಡಿ.ಶೆಟ್ಟಿ, ಕಡೇಶಿವಾಲಯ ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net