ಮೋಕ್ಷ ಸಾಧನೆಗೆ ದೇವರ ಅನುಗ್ರಹ ಅವಶ್ಯ

 ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ತಾಲೂಕು ವಿಪ್ರ ಬಾಂಧವರ ಸಹಕಾರದೊಂದಿಗೆ ಶಿವಪಂಚಾಕ್ಷರಿ ಯಾಗ ಸಂಪನ್ನಗೊಂಡಿತು. ಶರತ್ ಕೃಷ್ಣ ಪಡುವೆಟ್ನಾಯ, ಮುರಳೀಕೃಷ್ಣ ಆಚಾರ್ ಮೊದಲಾದವರಿದ್ದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ತಾಲೂಕು ವಿಪ್ರ ಬಾಂಧವರ ಸಹಕಾರದೊಂದಿಗೆ ಶಿವಪಂಚಾಕ್ಷರಿ ಯಾಗ ಸಂಪನ್ನಗೊಂಡಿತು. ಶರತ್ ಕೃಷ್ಣ ಪಡುವೆಟ್ನಾಯ, ಮುರಳೀಕೃಷ್ಣ ಆಚಾರ್ ಮೊದಲಾದವರಿದ್ದರು.
Published on
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಉಜಿರೆ ವಲಯದ ನೇತೃತ್ವದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಸಹಯೋಗದೊಂದಿಗೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಶ್ರೀಪತಿ ಎಳಚಿತ್ತಾಯರ ಪ್ರಧಾನ ಪೌರೋಹಿತ್ಯದಲ್ಲಿ ಲೋಕಕಲ್ಯಾಣಾರ್ಥ ಶಿವಪಂಚಾಕ್ಷರಿ ಯಾಗ ಭಾನುವಾರ ನಡೆಯಿತು.
ಶಿವಪ್ರಸಾದ್ ಬಾಯಾರಿತ್ತಾಯ ಮಾತನಾಡಿ, ನಮ್ಮ ಜನ್ಮ ಸಾರ್ಥಕ್ಯಕ್ಕೆ ಧರ್ಮ ಸಾಧನವೇ ಪ್ರಧಾನ. ಪೂರ್ವಾರ್ಜಿತ ಕರ್ಮಫಲ, ಭಗವಂತನ ಮೇಲಿನ ಭಕ್ತಿ, ಜ್ಞ್ಞಾನ, ಮೋಕ್ಷ ಸಾಧನೆಗೆ ರುದ್ರ ದೇವರ ಅನುಗ್ರಹ ಅವಶ್ಯ ಎಂದರು.
ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಲ್ನಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಮಹಿಳಾ ಘಟಕ ಹಾಗೂ ಯುವ ವಿಪ್ರ ವೇದಿಕೆ ಪದಾಧಿಕಾರಿಗಳು ಸಾಮೂಹಿಕವಾಗಿ ಲೋಕ ಕಲ್ಯಾಣ ಹಾಗೂ ಸಮಾಜದ ಸಂಘಟನೆ ಒಗ್ಗಟ್ಟಿಗಾಗಿ ಪ್ರಾರ್ಥಿಸಿ, ರುದ್ರ ಪಾರಾಯಣ ನಡೆಸಲಾಯಿತು. 11 ಕುಂಡಗಳಲ್ಲಿ ತಲಾ 15 ವಿಪ್ರ ಸಹಕಾರಿಗಳು 5 ಲಕ್ಷ ಪಂಚಾಕ್ಷರಿ ಮಂತ್ರಪಠಣದೊಂದಿಗೆ ಶಿವಪಂಚಾಕ್ಷರಿ ಯಾಗ ಪೂರ್ಣಾಹುತಿ ನಡೆಯಿತು.
ತಾಲೂಕು ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಆಚಾರ್ ಕಾರ್ಯಕ್ರಮ ಸಂಯೋಜಿಸಿದರು. ಉಜಿರೆ ವಲಯ ಕಾರ್ಯದರ್ಶಿ ಹರ್ಷಕುಮಾರ್ ಸಹಕರಿಸಿದರು. ಮಹಿಳಾ ಘಟಕದ ಸಹಕಾರರೊಂದಿಗೆ ಆಟಿ ಖಾದ್ಯಗಳ ಸವಿಭೋಜನ ವ್ಯವಸ್ಥೆ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net