

ಉಡುಪಿ ಜಿಲ್ಲೆ ಧಾರ್ಮಿಕ ಆಚಾರ&ವಿಚಾರಗಳಿಗೆ ಹೆಚ್ಚಿನ ಮಹತ್ವ ಕೊಡುವ ಜಿಲ್ಲೆ. ಇಲ್ಲಿ ಜನಿಸಿದ ನಾವುಗಳೇ ಪುಣ್ಯವಂತರು. ಇಲ್ಲಿನವರು ವಿಶ್ವದ ಯಾವುದೇ ಭಾಗದಲ್ಲಿದ್ದರೂ ಯಶಸ್ಸು ಕಾಣಲು ಇಲ್ಲಿನ ದೇವ-ದೈವದ ವರ ಹಾಗೂ ಮಣ್ಣಿನ ಗುಣ ಕಾರಣ. ಶಬರಿಮಲೆಯಂತೆ ಕಾಡಿನ ಮಧ್ಯೆ ಇರುವ ಇಂದ್ರಾಣಿ ಮುಖ್ಯಪ್ರಾಣನ ಸನ್ನಿಧಿಯು ಶಕ್ತಿ ತಾಣವಾಗಿದೆ. ಹನುಮನ ಸ್ಮರಣೆ, ಆರಾಧನೆಯೊಂದಿಗೆ ಸನಾತನ ಧರ್ಮ ಬೆಳೆಸೋಣ. ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸೋಣ.