ಕರ್ಮಫಲದಂತೆ ಒಲಿಯುತ್ತಾನೆ ಭಗವಂತ

 ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿದರು. ಎಚ್.ಪದ್ಮಕುಮಾರ್, ಮೋಹನ್ ರೈ, ಸುಮಂತ್‌ಕುಮಾರ್ ಜೈನ್, ಜಯಂತ ನಡುಬೈಲು, ಸುಬ್ರಹ್ಮಣ್ಯ ರಾವ್ ಇತರರಿದ್ದರು.
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿದರು. ಎಚ್.ಪದ್ಮಕುಮಾರ್, ಮೋಹನ್ ರೈ, ಸುಮಂತ್‌ಕುಮಾರ್ ಜೈನ್, ಜಯಂತ ನಡುಬೈಲು, ಸುಬ್ರಹ್ಮಣ್ಯ ರಾವ್ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಮನೋಶುದ್ಧತೆ ಹಾಗೂ ಕರ್ಮ ಫಲದ ಆಧಾರದಲ್ಲಿ ಭಗವಂತ ಒಲಿಯುತ್ತಾನೆ. ಹಿಂದೂಗಳ ಶ್ರದ್ಧಾ ಕೇಂದ್ರಗಳು ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಿವೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.
ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಕುಂಬಾರರ ಮಹಾಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಪದ್ಮಕುಮಾರ್ ಮಾತನಾಡಿ, ಬ್ರಹ್ಮಕಲಶ ಎಂದರೆ ಅದು ಏಕಭಾವದ ಭಕ್ತಿ ಶ್ರದ್ಧೆಯ ಪ್ರತಿಫಲ ಎಂದರು. ಮುಂಬೈ ಕಲಾ ಸಂಘಟಕ ಕರ್ನೂರು ಮೋಹನ್ ರೈ, ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್, ಪುತ್ತೂರು ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿದರು.
ಸನ್ಮಾನ: ಬ್ರಹ್ಮಕಲಶೋತ್ಸವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಸ್ಥಳಾವಕಾಶ ನೀಡಿದ ಯಾದವೇಂದ್ರ ರಾವ್ ಶರವೂರು ಅವರನ್ನು ಸನ್ಮಾನಿಸಿಲಾಯಿತು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದ ಹರ್ಷಿತ್ ಕಯ್ಯಪ್ಪೆ ಅವರನ್ನು ಗೌರವಿಸಲಾಯಿತು. ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ‘ಅಮ್ಮ’ ಬಿಡುಗಡೆಗೊಳಿಸಲಾಯಿತು. ಅದಿತಿ ಕುಂಡಡ್ಕ ಸಂಗೀತ ಸಂಯೋಜಿಸಿ ಹಾಡಿರುವ ಕ್ಷೇತ್ರದ ಕುರಿತಾದ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು. '
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ವಿಜಯ್ ಕುಮಾರ್ ಸೊರಕೆ, ಕಡಬ ದುರ್ಗಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಪುತ್ತೂರು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಪ್ರಮುಖರಾದ ಸುರೇಶ್‌ಕುಮಾರ್ ಕೂಡೂರು, ದಯಾನಂದ ರೈ ಮನವಳಿಕೆ, ಹರೀಶ್ ರೈ ಎಂ., ಬಾಬು ಮುಗೇರ ಮರುವಂತಿಲ ಮೊದಲಾದರು ಉಪಸ್ಥಿತರಿದ್ದರು.
ಶರವೂರು ಅಭಿವೃದ್ದಿ ಸಮಿತಿ ಅಧ್ಯಕ್ಷ ಡಾ.ಹೇಮಂತ್ ರೈ ಮನವಳಿಕೆ ಸ್ವಾಗತಿಸಿದರು. ಗಣರಾಜ ಕುಂಬ್ಳೆ ವಂದಿಸಿದರು. ಮಹೇಶ್, ಚಂದ್ರಹಾಸ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.
---ಫೋಟೊ---
ಕೆಡಿಬಿ_ ಏಪ್ರಿಲ್ 04-2
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿದರು. ಎಚ್.ಪದ್ಮಕುಮಾರ್, ಮೋಹನ್ ರೈ, ಸುಮಂತ್‌ಕುಮಾರ್ ಜೈನ್, ಜಯಂತ ನಡುಬೈಲು, ಸುಬ್ರಹ್ಮಣ್ಯ ರಾವ್ ಇತರರಿದ್ದರು.
***********************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net