ಕಾಲೇಜು ಪ್ರಾಂಶುಪಾಲ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸದಾಶಿವ ಪಡುವರಿ ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ರಾಜಶೇಖರ ದೇವಾಡಿಗ, ಶಾಖಾ ಪ್ರಬಂಧಕ ಆತ್ರೇಯ ಪ್ರಭು, ಉಪಪ್ರಬಂಧಕ ಗಣಪತಿ ಭಟ್, ಉಪ ಪ್ರಾಂಶುಪಾಲ ಪದ್ಮನಾಭ, ಲೇಖಕ, ಮಾಜಿ ಯೋಧ ಬೈಂದೂರು ಚಂದ್ರಶೇಖರ ನಾವಡ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ದತ್ತಾತ್ರೇಯ ಭಟ್ ಮತ್ತು ರವೀಂದ್ರ ಪಿ. ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಡಾ.ಚಂದ್ರಶೇಖರ್ ಮೊಗೇರ ಸ್ವಾಗತಿಸಿದರು. ಹರೀಶ್ ಕೋಟ್ಯಾನ್ ವಂದಿಸಿದರು.