ಉಡುಪಿ ಶಿರೂರು ಮಠದ ವೇದವರ್ಧನ ಶ್ರೀಗಳ ಪರ್ಯಾಯೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆ ಆಗಲಿದೆ ಎಂದು ಶಾಸಕ ಹರೀಶ್ ಪೂಂಜಾ ಭರವಸೆ ನೀಡಿದರು. ಉಜಿರೆಯ ಶಾರದಾ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ ಉಡುಪಿ ಪರ್ಯಾಯ ಮಹೋತ್ಸವದ ಅದ್ದೂರಿ ಆಚರಣೆಗೆ ಈ ಭಾಗದಿಂದಲೂ ಸಹಕಾರ ನೀಡಲಾಗುವದು ಎಂದರು. ಸ್ವಾಗತ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಶಿರೂರು ಪರ್ಯಾಯದ ಆಮಂತ್ರಣ ನೀಡಿದರು. ಜನಾರ್ದನ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶರತ್ಕೃಷ್ಣ ಪಿ., ಉದ್ಯಮಿ ಮೋಹನಕುಮಾರ್, ಗ್ರಾಪಂ ಅಧ್ಯಕ್ಷ ಉಷಾಕಿರಣ್, ಮಧುಕರ್, ಸಮಿತಿಯ ವಿಷ್ಣುಪ್ರಸಾದ್ ಪಾಡಿಗಾರ್, ಶ್ರೀನಿವಾಸ್ ಭಾದ್ಯ ಇದ್ದರು.