

ಬದಿಯಡ್ಕ: ಶಾಲೆಗೆ ತೆರಳುತ್ತಿದ್ದ 13ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ಪ್ರಕರಣದ ದಾಖಲಾಗಿದೆ. ಸೋಮವಾರ ಬೆಳಗ್ಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಲಕಿ ಒಬ್ಬಳೇ ನಡೆದು ಶಾಲೆಗೆ ತೆರಳುತ್ತಿದ್ದ ವೇಳೆ ದಾರಿಮಧ್ಯೆ ವ್ಯಕ್ತಿಯೋರ್ವ ಬಾಲಕಿಯ ದೇಹವನ್ನು ಸ್ಪರ್ಶಿಸಿದ್ದಾನೆನ್ನಲಾಗಿದೆ. ಈ ವೇಳೆ ಬಾಲಕಿ ಬೊಬ್ಬೆ ಹಾಕಿದ್ದು ಅಷ್ಟರಲ್ಲಿ ಆತ ಓಡಿ ಪರಾರಿಯಾಗಿದ್ದಾನೆ. ಬಾಲಕಿ ಶಾಲೆಗೆ ಬಂದು ಸಹಪಾಠಿಗಳಲ್ಲಿ ವಿಷಯ ತಿಳಿಸಿದ್ದು ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಪೋಕ್ಸೋ ಪ್ರಕರಣ ದಾಖಲಿಸಿರುವ ಪೊಲೀಸರು ಶೋಧ ಆರಂಭಿಸಿದ್ದಾರೆ.