ಆದಿಉಡುಪಿಯಲ್ಲಿ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ ಕರ್ನಲ್ ಡಾ. ಎಫ್ಇಎ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಪರಮಶಿವ, ಕಮಡೋರ್ ಜೆರೋಮ್ ಕ್ಯಾಸ್ಟಲಿನ್, ಗಣೇಶ್ ರಾವ್, ಗಣಪಯ್ಯ ಶೇರಿಗಾರ್, ಗಿಲ್ಬರ್ಟ್ ಬ್ರಿಗಾಂಝಾ, ಪ್ರಭಾಕರ್ ನಾಯ್ಕ್, ತುಳಸಿ ದೇವಾಡಿಗ, ಸುಮತಿ ಶ್ರೀಧರ್ ಇತರರಿದ್ದರು.
Published on:
Copied
Follow Us
* ಅಧ್ಯಕ್ಷ ಕರ್ನಲ್ ಡಾ. ಎಫ್ಇಎ ರೋಡ್ರಿಗಸ್ ಘೋಷಣೆ
* ಆದಿಉಡುಪಿಯಲ್ಲಿ ಮಾಜಿ ಸೈನಿಕರ ಸಹಕಾರಿ ಮಹಾಸಭೆ
ಉಡುಪಿ: ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘವು ಸತತವಾಗಿ 'ಎ' ಗ್ರೇಡ್ ಹೊಂದಿದ್ದು, 2025-26ನೇ ಸಾಲಿನಲ್ಲಿ ಒಟ್ಟು 325 ಕೋಟಿ ರೂ. ವ್ಯವಹಾರ ನಡೆಸಿದೆ. 40 ಕೋಟಿ ರೂ. ಸಾಲ ಹೊರಬಾಕಿಯಿದ್ದು, 1.79 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಶೇ.99 ಸಾಲ ವಸೂಲಾತಿ ಸಾಧನೆಯಾಗಿದ್ದು ಸದಸ್ಯರಿಗೆ ಶೇ.22 ಲಾಭಾಂಶ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕರ್ನಲ್ ಡಾ. ಎಫ್ಇಎ ರೋಡ್ರಿಗಸ್ ತಿಳಿಸಿದರು.
ಆದಿಉಡುಪಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ (ಜು.26) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ 2025&26ನೇ ಸಾಲಿನ ಮಹಾಸಭೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯರಿಗೆ ಸನ್ಮಾನ
ಮಾಜಿ ಸೈನಿಕರ ಸಹಕಾರ ಸಂಘ ಹಾಗೂ ವೇದಿಕೆ ಜಂಟಿಯಾಗಿ 80 ವರ್ಷ ಮೇಲ್ಪಟ್ಟ ಮಾಜಿ ಸೈನಿಕರಾದ ಎವಿಎಂ ರಮೇಶ್ ಕಾರ್ಣಿಕ್, ನಿವೃತ್ತ ಸಬ್ ಮೇಜರ್ ಪಿ.ರಾಧಾಕೃಷ್ಣ ಶೆಣೈ, ಸಬ್ ಮೇಜರ್ ದಿನೇಶ್ ಕಿಣಿ, ಸಬ್. ಕ್ಲೇಮೆಂಟ್ ಡಿಸಿಲ್ವ, ಸಿಪಿಎಲ್ ಫೆರ್ನಾಂಡಿಸ್ ಡೆಸ್ಮಂಡ್ ಪೀಟರ್, ಸಿಪಿಎಲ್ ವಲ್ಲೇರಿಯನ್ ನರೋನ್ಹ, ಸಿಪಿಎಲ್ ದಿನೇಶ್ ನಾಯಕ್, ಸಿಪಾಯಿ ಕೆ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರನ್ನೂ ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.