

ಹತ್ತು ದಿನದಿಂದ ಹೋಟೆಲ್ ಹೊರಗಡೆ ಒಲೆ ಹಾಕಿ ಕೆಲವೊಂದು ಆಹಾರ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. 35 ವರ್ಷದಿಂದ ಹೋಟೆಲ್ ಉದ್ಯಮ ನಂಬಿಕೊಂಡು ಬಂದ ಹಲವು ಮಂದಿಗೆ, ಉದ್ಯೋಗದಿಂದ ಪ್ರತಿ ದಿನ ಹೋಟೆಲ್ ನಂಬಿ ಬರುವ ಗ್ರಾಹಕರಿಗಾಗಿ ಸಾಧ್ಯವಾದಷ್ಟು ದಿನ ಮುಂದುವರಿಸುತ್ತೇವೆ.
ಬ್ರಹ್ಮಾವರ ನಗರ ಭಾಗದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನಂತೆ 20 ಮಂದಿ ಹತ್ತು ದಿನದಿಂದ ಕೆಲಸ ಇಲ್ಲದೆ ಇದ್ದೇವೆ. ನಮಗೆ ಹೋಟೆಲ್ ಕೆಲಸ ಬಿಟ್ಟು ಬೇರೆ ಕೆಲಸ ತಿಳಿದಿಲ್ಲ. ಗ್ಯಾಸ್ ಇಲ್ಲದೆ ಹೋಟೆಲ್ ಬಂದ್ ಆದ ಕಾರಣ ಜೀವನ ಕಷ್ಟವಾಗಿದೆ.