ಕಾಪು ಕಿಂಡಿ ಅಣೆಕಟ್ಟು ಸಮೀಪ ತ್ಯಾಜ್ಯ

 ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಕಾಪು ಕಿಂಡಿ ಅಣೆಕಟ್ಟಿನ ಬಳಿ ರಸ್ತೆ ಬದಿ ತ್ಯಾಜ್ಯ ಎಸೆದಿರುವುದು.
ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಕಾಪು ಕಿಂಡಿ ಅಣೆಕಟ್ಟಿನ ಬಳಿ ರಸ್ತೆ ಬದಿ ತ್ಯಾಜ್ಯ ಎಸೆದಿರುವುದು.
Published on

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ಕಿಂಡಿ ಅಣೆಕಟ್ಟಿನ ಸಮೀಪದ ರಸ್ತೆ ಬದಿಯಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ತಂದು ಸುರಿದಿರುವುದು ಬೆಳಕಿಗೆ ಬಂದಿದೆ.

ಗೋಣಿಚೀಲಗಳಲ್ಲಿ ತುಂಬಿಸಿ ತಂದ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆಯಲಾಗಿದೆ. ನಿರಂತರ ಮಳೆಗೆ ಈ ತ್ಯಾಜ್ಯ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಸಮೀಪದಲ್ಲೇ ಹರಿಯುವ ಮೃತ್ಯುಂಜಯ ನದಿಗೆ ಸೇರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಈ ಹಿಂದೆ ತ್ಯಾಜ್ಯ ಸುರಿಯುವುದನ್ನು ತಡೆಯುವ ಉದ್ದೇಶದಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಸದ್ಯ ಕಣ್ಮರೆಯಾಗಿರುವುದು ಕಸ ಎಸೆಯುವವರಿಗೆ ಅನುಕೂಲ ಕಲ್ಪಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net