ಗಂಗಾವತಿ ಪ್ರಾಣೇಶ್​ಗೆ 'ಹಾಸ್ಯ ಸಾಮ್ರಾಟ್​' ಬಿರುದು

ಉಡುಪಿಯಲ್ಲಿ ಗಂಗಾವತಿ ಪ್ರಾಣೇಶ್​ ಅವರಿಗೆ 'ಹಾಸ್ಯ ಸಾಮ್ರಾಟ್​' ಬಿರುದು ನೀಡಲಾಯಿತು. ಡಾ. ಶಶಿಕಿರಣ್​ ಶೆಟ್ಟಿ, ಮನು ಹಂದಾಡಿ, ಬಸವರಾಜ್​ ಮಹಾಮನಿ, ಡಾ. ಬೆಣ್ಣೆ ಬಸವರಾಜ್​, ಡಾ.ಸುಮಾ ಶೆಟ್ಟಿ, ಬಂಗಾರಪ್ಪ ಉದಯ್​ ನಾಯ್ಕ್​, ಅರುಣ್​ ಜತ್ತನ್​ ಇತರರಿದ್ದರು.

Published on

* ಉಡುಪಿಯಲ್ಲಿ 'ಸ್ವರ್ಗದಲ್ಲೊಂದು ಹಾಸ್ಯ ಸಂಜೆ' ಕಾರ್ಯಕ್ರಮ

ಉಡುಪಿ: ಹೋಂ ಡಾಕ್ಟರ್ಸ್​ ಫೌಂಡೇಷನ್​ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಇದರ ಕಟ್ಟಡ ಸಹಾಯಾರ್ಥಕವಾಗಿ ಕೊಳಲಗಿರಿಯ ಸಿಂಧೂರ ಸಭಾಂಗಣದಲ್ಲಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್​ ಮತ್ತು ತಂಡದವರಿಂದ ಭಾನುವಾರ ರಾತ್ರಿ (ಮೇ 17) 'ಸ್ವರ್ಗದಲ್ಲೊಂದು ಹಾಸ್ಯ ಸಂಜೆ' ಕಾರ್ಯಕ್ರಮ ನಡೆಯಿತು.
ಗಂಗಾವತಿ ಪ್ರಾಣೇಶ್​ ಅವರಿಗೆ 'ಹಾಸ್ಯ ಸಾಮ್ರಾಟ್​' ಬಿರುದು ನೀಡಿ ಗೌರವಿಸಲಾಯಿತು. ಮನು ಹಂದಾಡಿ, ಬಸವರಾಜ್​ ಮಹಾಮನಿ, ಡಾ. ಬೆಣ್ಣೆ ಬಸವರಾಜ್​ ಅವರಿಂದ ಹಾಸ್ಯದ ಹಬ್ಬ ನಡೆಯಿತು. ಈ ಸಂದರ್ಭದಲ್ಲಿ ಹೋಂ ಡಾಕ್ಟರ್​ ಫೌಂಡೇಷನ್​ನ ಮುಖ್ಯಸ್ಥ ಡಾ. ಶಶಿಕಿರಣ್​ ಶೆಟ್ಟಿ ಅವರನ್ನು ಕಲಾವಿದರು ಗೌರವಿಸಿದರು.
ಫೌಂಡೇಷನ್​ನ ಸದಸ್ಯರಾದ ಡಾ.ಸುಮಾ ಶೆಟ್ಟಿ, ಬಂಗಾರಪ್ಪ ಉದಯ್​ ನಾಯ್ಕ್​, ಅರುಣ್​ ಜತ್ತನ್​, ಪ್ರವಿಣ್​ ಜತ್ತನ್​, ಜೀವನ್​ ಜತ್ತನ್​, ಸುದರ್ಶನ್​ ಜತ್ತನ್​, ಕಿರಣ್​ ಜತ್ತನ್​, ಮಿಲಿತ್​ ಹೆಗ್ಡೆ, ರಾಘವೇಂದ್ರ ಪೂಜಾರಿ, ವಾಣಿಶ್ರೀ, ಸುಂದರ್​ ಪೂಜಾರಿ, ರಾಘವೇಂದ್ರ ಕರ್ವಾಲು, ಸಂಧ್ಯಾ ಶೆಣೈ ಇತರರು ಉಪಸ್ಥಿತರಿದ್ದರು. ಮಂಜುನಾಥ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net