ಯುವಕರಿಗೆ ಹಲ್ಲೆಗೈದು ಹಣ ಎಗರಿಸಿದ ತಂಡ

Crime
Crime
Published on

ಕಾಸರಗೋಡು: ಕಾರಿನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕಾರಲ್ಲಿ ಹೋಗುತ್ತಿದ್ದಾಗ ಸ್ಕೂಟರಲ್ಲಿ ಆಗಮಿಸಿದ ತಂಡವೊಂದು ಉಜಿರೆಕೆರೆಯಲ್ಲಿ ಕಾರು ತಡೆದು ಕೈಯಿಂದ ಥಳಿಸಿ ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿದರು.

ಅಹಮ್ಮದ್ ಇಜಾಸ್ ಅವರ 6 ಸಾವಿರ ರೂ. ನಗದು, ಪಾನ್‌ಕಾರ್ಡ್, ದಾಖಲೆಗಳನ್ನೊಳಗೊಂಡ ಪರ್ಸ್ ಹಾಗೂ ಗೂಗಲ್ ಪೇ ಮೂಲಕ 7,406 ರೂ. ಎಗರಿಸಿರುವುದಲ್ಲದೆ, 20 ಸಾವಿರ ರೂ. ನೀಡುವಂತೆ ಬೆದರಿಕೆಯೊಡ್ಡಿರುವುದಾಗಿ ಬಂಬ್ರಾಣ ನಾಂಬಾಡಿ ನಿವಾಸಿ ಹಸೈನಾರ್, ಅಹಮ್ಮದ್ ಇಜಾಸ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net