ಆತ್ಮದ ಅರಿವಿನ ಆಶಯವೇ ಗಾಂಧೀ ತತ್ತ್ವ

ಉಡುಪಿಯ ಜಿ.ಶಂಕರ್​ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಡಾ. ನಿಕೇತನಾ ಉದ್ಘಾಟಿಸಿದರು. ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಡಾ. ಪ್ರಸಾದ್​ ರಾವ್​, ರಾಕೇಶ್​, ಕವಿತಾ ಇದ್ದರು.
ಉಡುಪಿಯ ಜಿ.ಶಂಕರ್​ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಡಾ. ನಿಕೇತನಾ ಉದ್ಘಾಟಿಸಿದರು. ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಡಾ. ಪ್ರಸಾದ್​ ರಾವ್​, ರಾಕೇಶ್​, ಕವಿತಾ ಇದ್ದರು.
Published on: 

* ಪ್ರಾಧ್ಯಾಪಕ ಡಾ. ಪ್ರಸಾದ್​ ರಾವ್​ ಅನಿಸಿಕೆ

* 'ಕಾರಂತರ ಚಿಂತನೆಯಲ್ಲಿ ಗಾಂಧೀಜಿ' ಉಪನ್ಯಾಸ

ಉಡುಪಿ: ಬ್ರಿಟಿಷರ ಆಡಳಿತದಲ್ಲಿ ಉಪ್ಪಿನಂತಹ ಮೂಲ ವಸ್ತುವನ್ನೂ ತಯಾರಿಸಲು ಅವಕಾಶ ಇಲ್ಲದಿರುವುದು ಸ್ವಾತಂತ್ರ್ಯ ಹೀನತೆಯ ಸಂಕೇತ ಎಂದು ಗಾಂಧೀಜಿ ಸಾರಿದರು. ರೈತರು ಹಾಗೂ ಬಡವರ್ಗದ ಅಸಹಾಯಕತೆಯನ್ನು ಚಳವಳಿಯ ಮೂಲಕ ಜನಾಂದೋಲನದ ರೂಪಕ್ಕೆ ತಂದರು. ನಮ್ಮನ್ನು ಮತ್ತೊಬ್ಬರು ಆಳಬಾರದು, ನಾವು ಯಾರೆಂಬ ಆತ್ಮಪರಿಚಯದ ಅರಿವೇ ಗಾಂಧೀಜಿಯ ತತ್ತ್ವ ಚಿಂತನೆಯ ಮೂಲ ಆಶಯವಾಗಿತ್ತು ಎಂದು ಬಾರ್ಕೂರಿನ ಎಸ್​ಆರ್​ಎಸ್​ಎಂಎನ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಾಧ್ಯಾಪಕ ಡಾ. ಪ್ರಸಾದ್​ ರಾವ್​ ತಿಳಿಸಿದರು.

ಉಡುಪಿಯ ಅಜ್ಜರಕಾಡು ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿಜಿಎವಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್​, ಕಾಲೇಜ್​ನ ಎನ್​ಎಸ್​ಎಸ್​ ಹಾಗೂ ಯುವ ರೆಡ್​ ಕ್ರಾಸ್​ ಘಟಕದ ವತಿಯಿಂದ ಗಾಂಧಿ ಜಯಂತಿ ನಿಮಿತ್ತ ಶುಕ್ರವಾರ (ಅ.2) ಆಯೋಜಿಸಿದ್ದ 'ಕಾರಂತರ ಚಿಂತನೆಯಲ್ಲಿ ಗಾಂಧೀಜಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಳವಳಿಗಳಿಗೆ ಗಾಂಧೀಜಿ ಪ್ರೇರಣೆ

ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಮಾತನಾಡಿ, ಸ್ವದೇಶಿ ಚಳವಳಿ, ಸ್ವಚ್ಛತಾ ಅಭಿಯಾನದಂತಹ ಹಲವು ಚಳವಳಿಗಳ ಮೂಲ ಪ್ರೇರಣೆ ಗಾಂಧೀಜಿಯೇ ಆಗಿದ್ದಾರೆ. ಲಾಲ್​ ಬಹಾದೂರ್​ ಶಾಸ್ತ್ರೀ ಅವರೂ ಸಹ ಗಾಂಧಿಯ ಶಿಷ್ಯರಾಗಿದ್ದು, ತನ್ನ ಬದುಕಿನಲ್ಲಿ ಗಾಂಧೀವಾದಿ ಮೌಲ್ಯ ಅಳವಡಿಸಿಕೊಂಡಿದ್ದರು ಎಂದರು.

ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜ್​ನ ಪ್ರಾಂಶುಪಾಲೆ ಪ್ರೊ. ಡಾ. ನಿಕೇತನಾ ಉದ್ಘಾಟಿಸಿ, ಗಾಂಧೀಜಿಯವರ ಪ್ರಬಲ ಅಸ್ತ್ರ್ರಗಳಾದ ಸತ್ಯ ಮತ್ತು ಅಹಿಂಸೆ ಇಂದಿಗೂ ಪ್ರಸ್ತುತವಾಗಿವೆ ಎಂದರು.

ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಸಂಚಾಲಕ ಸತೀಶ್​ ಕೊಡವೂರು, ವರ್ಷಾ, ಪ್ರಾಧ್ಯಾಪಕರಾದ ಪ್ರೊ. ಪಿ.ಬಿ. ಪ್ರಸನ್ನ, ರೇಖಾ ಎಸ್​.ಎನ್​., ಜಯಲಿಂಗ ಮೂರ್ತಿ, ಸಚಿನ್​ ಕೇಣಿಕರ್​, ಡಾ. ರವೀಶ್​ ಬಿ., ಪುರುಷೋತ್ತಮ್​, ಪುನೀತ್​ ತೆಂಡುಲ್ಕರ್​, ಸಂತೋಷ್​ ಪ್ರಭು ಎಂ., ಅಶ್ವಿಜಾ ಇತರರಿದ್ದರು.

ವಿದ್ಯಾರ್ಥಿನಿಯರು ರಘುಪತಿ ರಾಘವ ರಾಜಾರಾಮ್​ ಹಾಗೂ ವೈಷ್ಣವ ಜನ ತೋ ಹಾಡಿದರು.

ಯುವ ರೆಡ್​ ಕ್ರಾಸ್​ ಘಟಕದ ಸಂಚಾಲಕಿ ಕವಿತಾ ಸ್ವಾಗತಿಸಿದರು. ಡಾ. ಸಫಿಯಾ ವಂದಿಸಿದರು. ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ರಾಕೇಶ್​ ಕಾರ್ಯಕ್ರಮ ನಿರೂಪಿಸಿದರು.

ಶಿವರಾಮ ಕಾರಂತರು ಗಾಂಧೀಜಿಯವರೊಂದಿಗೆ ಕೈಗಾರಿಕೀಕರಣದ ಕುರಿತು ಕೆಲ ವಿಚಾರಗಳಲ್ಲಿ ಸಾಮ್ಯತೆ ಹೊಂದಿದ್ದರೂ ಬ್ರಹ್ಮಚರ್ಯ, ತ್ಯಾಗ ಹಾಗೂ ಸರಳ ಜೀವನದಂತಹ ಅವರ ವಿಚಾರವನ್ನು ವಿರೋಧಿಸುತ್ತಿದ್ದರು. 1909ರಲ್ಲಿ ಗಾಂಧೀಜಿ ಬರೆದ 'ಹಿಂದ್​ ಸ್ವರಾಜ್​' ಕೃತಿಯು ಅವರ ವೈಯಕ್ತಿಕ ಸಂವಿಧಾನದಂತಿದ್ದು, ಗಾಂಧೀಜಿಯ ಚಿಂತನೆ ತಿಳಿಯುವ ಮಹತ್ವದ ಕೃತಿಯಾಗಿದೆ.
> ಡಾ. ಪ್ರಸಾದ್​ ರಾವ್​. ಪ್ರಾಧ್ಯಾಪಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net