ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ, ಪಿಡಿಒ ಮಹೇಶ್.
Published on:
Copied
Follow Us
ಕೊಕ್ಕರ್ಣೆ: ಸ್ವಚ್ಛ ಭಾರತ ಮಿಷನ್, ನರೇಗಾ, ಜಲಜೀವನ್ ಮಿಷನ್ ಸಹಿತ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಸ್ಥಿರತೆ ಕಾಯ್ದುಕೊಂಡಿರುವ ಕಾಡೂರು ಗ್ರಾಮ ಪಂಚಾಯಿತಿ ಸತತ ನಾಲ್ಕನೇ ಬಾರಿ ಗಾಂಧಿಗ್ರಾಮ ಪ್ರಶಸ್ತಿ ಪಡೆದುಕೊಂಡಿದೆ.
2023-24ರ ಸಾಲಿನ ಯೋಜನೆಗಳ ಅನುಷ್ಠಾನ ಹಾಗೂ ಜನಪರ ಕಾರ್ಯ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಪುರಸ್ಕಾರ ಪ್ರದಾನಿಸಲಾಯಿತು.
ಕಾಡೂರು ಗ್ರಾಮ ಪಂಚಾಯಿತಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದೆ. ಸರಪಂಚ್ ಸಂವಾದ್ ಮೂಲಕ ಗ್ರಾ.ಪಂ. ಅಧ್ಯಕ್ಷರು ದೆಹಲಿಯ ನಾವಿನ್ಯತಾ ಸಮಾವೇಶದಲ್ಲಿ ಭಾಗವಹಿಸಿ ಪಂಚಾಯಿತಿಯ ಯಶೋಗಾಥೆ ಮಂಡಿಸಿರುವುದು ಮತ್ತೊಂದು ಹಿರಿಮೆ.
ಕಾಡೂರು ಹಾಗೂ ನಡೂರು ಗ್ರಾಮಗಳಲ್ಲಿ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕೆ ಪೂರಕ ವಾತಾವರಣವಿದೆ. ಎಸ್‌ಎಲ್‌ಆರ್‌ಎಂ ಹಾಗೂ ಜೆಜೆಎಂ ಸಹಿತ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ನಾಗರಿಕರು ಹಾಗೂ ಸಿಬ್ಬಂದಿ ನಡುವಿನ ಸಮನ್ವಯತೆ ಕಾರಣ.
ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೆಮ್ಮೆಯ ವಿಷಯ. ನಮ್ಮ ಗ್ರಾಮಗಳಲ್ಲಿ ಇನ್ನಷ್ಟು ಹೊಸ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಇದು ಪ್ರೇರಣೆ ನೀಡಲಿದೆ.
ಕಾಡೂರು ಗ್ರಾ ಪಂ ಗೆ ಗಾಂಧಿ ಗ್ರಾಮ ಪ್ರಶಸ್ತಿ Gandhi Gram Award for Kadoor Gram Panchayat