ಕಂಪೌಂಡ್ ಸುತ್ತಲು ಗಿಡಗಂಟಿ, ಹುಲ್ಲುಗಳು ಬೆಳೆದುನಿಂತಿವೆ. ಗೋಡೆಗಳಿಗೆ ಬಳಿದ ಬಣ್ಣ ಮಾಸಿಹೋಗಿ, ಪಾಚಿಬೆಳೆದುಕೊಂಡಿದೆ. ನೀರಿನ ಟ್ಯಾಂಕಿನ ಮುಚ್ಚಳ ತೆರೆದುಕೊಂಡಿದ್ದು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಕಂಪೌಂಡಿನ ಒಳಾಂಗಣ ಮತ್ತು ಸಭಾಭವನದ ಒಳಾಂಗಣದಲ್ಲಿ ಕಸ ತ್ಯಾಜ್ಯಗಳು ಚದುರಿಕೊಂಡಿವೆ. ಶೌಚಾಲಯದ ಬಾಗಿಲು ಮುರಿದುಬಿದ್ದಿದೆ. ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ಕಿಡಿಗೇಡಿಗಳು ಪೋಕರಿಗಳ ಅಡ್ಡೆಯಾಗಿದೆ. ಜುಗಾರಿ ಆಡುವರು, ಮದ್ಯವ್ಯಸನಿಗಳು ಪಾನಮತ್ತರಾಗಿ ಮಲಗುತ್ತಿದ್ದಾರೆ.