ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಪ್ರಸ್ತುತ ತೆರಿಗೆ ಬೇಡಿಕೆಯ ಶೇ.100ರಷ್ಟು ತೆರಿಗೆ ವಸೂಲಾತಿ, ಜಲಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನ, ಗ್ರಾಮದ ಸ್ವಚ್ಛತೆಗೆ ಸಂಬಂಧಪಟ್ಟಂತೆ ಸ್ವಚ್ಛವಾಹಿನಿ ಖರೀದಿ, ಸುಸಜ್ಜಿತ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣ, ಗ್ರಾಪಂ ಮಟ್ಟದ ಒಕ್ಕೂಟದೊಂದಿಗೆ ಒಡಂಬಡಿಕೆ ಮೂಲಕ ಘನತ್ಯಾಜ್ಯ ನಿರ್ವಹಣೆ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ, ಕೂಸಿನ ಮನೆ ನಿರ್ವಹಣೆ, ವೈಯಕ್ತಿಕ, ಸಾರ್ವಜನಿಕ ಕಾಮಗಾರಿಗಳ ಯಶಸ್ಸಿನ ಅನುಷ್ಠಾನ, ಮಾಸಿಕ ರೋಜ್‌ಗಾರ್ ದಿನಾಚರಣೆ, ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಗಳ ಆಯೋಜನೆ, ಗ್ರಾಮದಲ್ಲಿ, ಬೀದಿದೀಪಗಳ ವ್ಯವಸ್ಥೆ, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಸುಸಜ್ಜಿತ ಅರಿವು ಕೇಂದ್ರ, ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ನರೇಗಾ ಯೋಜನೆಯಡಿ ಮತ್ತು ಇತರೆ ಇಲಾಖೆ ಅನುದಾನದಡಿ ಸುಸಜ್ಜಿತ ಅಂಗನವಾಡಿ ಕಟ್ಟಡಗಳ ರಚನೆ, ಆರೋಗ್ಯ ಉಪಕೇಂದ್ರ, ಕ್ಷೇಮಕೇಂದ್ರದ ಮೂಲಕ ಎಲ್ಲಾ ಮಕ್ಕಳಿಗೆ ರೋಗ ನಿರೋಧಕ ಲಸಿಕೆ, ಗ್ರಾಮದ ಜನರಿಗೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ಗ್ರಾಮದ ಎಲ್ಲ ವಿಶೇಷಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸಲು ವಿಶೇಷ ಒತ್ತು ನೀಡಿದೆ.