ಜುಗಾರಿ, ಆರು ಮಂದಿ ಬಂಧನ

 ಸುಜಿತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್ ಮತ್ತು ಪ್ರಶಾಂತ
ಸುಜಿತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್ ಮತ್ತು ಪ್ರಶಾಂತ
Published on

ಕಾರ್ಕಳ: ನಿಟ್ಟೆ ಗ್ರಾಮದ ಹೋಟೆಲ್‌ನಲ್ಲಿ ಹಣ ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ರು ಮಂದಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಮಂಗಳವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಸುಜಿತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್ ಮತ್ತು ಪ್ರಶಾಂತ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯಶೋದರ(ಅಣ್ಣು), ನೂರು ಮಹಮ್ಮದ್, ರವಿ ಶೆಟ್ಟಿ ಹಾಗೂ ಸತೀಶ್ ಪರಾರಿಯಾಗಿದ್ದಾರೆ.

ಜುಗಾರಿ ಆಟಕ್ಕೆ ಬಳಸಲಾಗಿದ್ದ 16,350 ರೂ. ನಗದು, ಇಸ್ಪೀಟ್ ಎಲೆಗಳು, 17 ಸಾವಿರ ರೂ. ಮೌಲ್ಯದ 7 ಮೊಬೈಲ್‌ಗಳು ಹಾಗೂ ಕುರ್ಚಿ, ಪೀಠೋಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪರಾರಿಯಾದವರ ಪತ್ತೆಗಾಗಿ ಹಾಗೂ ಜುಗಾರಿ ಆಡಲು ಅವಕಾಶ ಮಾಡಿಕೊಟ್ಟ ಹೋಟೆಲ್ ಮಾಲೀಕರ ಬಂಧನಕ್ಕಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net