ಆಂಬುಲೆನ್ಸ್ ಸೇವೆ ಆರಂಭಕ್ಕೆ ನಿಧಿ ಸಂಗ್ರಹ

ಸರ್ವೇಶ್ವರ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಉಚಿತ ಅಂಬ್ಯುಲೆನ್ಸ್ ಸೇವೆಗೆ ನಿಧಿ ಸಂಗ್ರಹಕ್ಕಾಗಿ ಹಮ್ಮಿಕೊಂಡಿರುವ ಪಿಲಿಏಸ ಕಾರ್ಯಕ್ರಮದ ಪೋಸ್ಟರನ್ನು ಮನೋಹರ ಅಡ್ಯಂತಾಯ, ವಿಶ್ವನಾಥ ಸನಿಲ್, ಪುರುಷೋತ್ತಮ ಸಾಲ್ಯಾನ್, ನವೀನ್ ಸಾಲ್ಯಾನ್, ಕಿರಣ್ ಪೂಜಾರಿ ಬಿಡುಗಡೆಗೊಳಿಸಿದರು.
ಸರ್ವೇಶ್ವರ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಉಚಿತ ಅಂಬ್ಯುಲೆನ್ಸ್ ಸೇವೆಗೆ ನಿಧಿ ಸಂಗ್ರಹಕ್ಕಾಗಿ ಹಮ್ಮಿಕೊಂಡಿರುವ ಪಿಲಿಏಸ ಕಾರ್ಯಕ್ರಮದ ಪೋಸ್ಟರನ್ನು ಮನೋಹರ ಅಡ್ಯಂತಾಯ, ವಿಶ್ವನಾಥ ಸನಿಲ್, ಪುರುಷೋತ್ತಮ ಸಾಲ್ಯಾನ್, ನವೀನ್ ಸಾಲ್ಯಾನ್, ಕಿರಣ್ ಪೂಜಾರಿ ಬಿಡುಗಡೆಗೊಳಿಸಿದರು.
Published on
ಪಡುಬಿದ್ರಿ: ಮೂಳೂರು ಸರ್ವೇಶ್ವರ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಸೆ.16 ಮತ್ತು 17ರಂದು ಪಿಲಿಏಸ-2026 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟಿಗಳಾದ ವಿಶ್ವನಾಥ್ ಸನಿಲ್ ಮತ್ತು ಪುರುಷೋತ್ತಮ ಸಾಲ್ಯಾನ್ ತಿಳಿಸಿದರು.
ಕಾಪುವಿನಲ್ಲಿ ಸೋಮವಾರ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು. ಸರ್ವೇಶ್ವರ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಹಲವು ವರ್ಷಗಳಿಂದ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಾನವೀಯ ಸೇವಾ ಕ್ಷೇತ್ರಗಳಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಇದೀಗ ಉಚಿತ ಅಂಬುಲೆನ್ಸ್ ಸೇವೆ ಒದಗಿಸಲು ಅಗತ್ಯವಿರುವ ನಿಧಿ ಸಂಗ್ರಹಿಸುವ ಸಲುವಾಗಿ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಪಿಲಿಏಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.16ರಂದು ಸಂಜೆ ಮೂಳೂರು ಸಾಯಿರಾಧಾ ಬೀಚ್ ರೆಸಾರ್ಟ್ ಪಾರ್ಕಿಂಗ್ ಮೈದಾನದಲ್ಲಿ ಸಂಪ್ರದಾಯಬದ್ಧ ಊದು ಪೂಜೆಯೊಂದಿಗೆ ಚಾಲನೆ ನೀಡಲಾಗುವುದು. ಬಳಿಕ ಹುಲಿವೇಷ ಕುಣಿತ ಮತ್ತು ಪ್ರದರ್ಶನ ನಡೆಯಲಿದೆ ಎಂದರು.
ಪಿಲಿಏಸ ಕುಣಿತದಿಂದ ಸಂಗ್ರಹವಾಗುವ ಸಂಪೂರ್ಣ ನಿಧಿಯನ್ನು ಆಂಬುಲೆನ್ಸ್ ವಾಹನ ಖರೀದಿ, ವೈದ್ಯಕೀಯ ಉಪಕರಣಗಳ ಅಳವಡಿಕೆ, ವಾಹನದ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಉಚಿತ ತುರ್ತು ಸೇವೆ ಒದಗಿಸಲು ಬಳಸಲಾಗುವುದು ಎಂದರು.
ಮೂಳೂರು ಶ್ರೀ ಸರ್ವೇಶ್ವರ ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಮನೋಹರ ಅಡ್ಯಂತಾಯ, ಪ್ರಮುಖರಾದ ನವೀನ್ ಸಾಲ್ಯಾನ್, ಕಿರಣ್ ಪೂಜಾರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net