ಉತ್ತಮ ಆರೋಗ್ಯ ಸೇವೆಯಿಂದ ಮೇಲ್ದರ್ಜೆಗೆ

 ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ರಾಜೇಶ್ ಎನ್.ಎಸ್., ಗಿರೀಶ್ ಆಚಾರ್ಯ, ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ರಾಜೇಶ್ ಎನ್.ಎಸ್., ಗಿರೀಶ್ ಆಚಾರ್ಯ, ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.
Published on
ಸುಬ್ರಹ್ಮಣ್ಯ: ಜನತೆಗೆ ಉತ್ತಮವಾದ ಆರೋಗ್ಯ ಸೌಲಭ್ಯ ನೀಡಿದರೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಚಿಕಿತ್ಸೆ ಪಡೆಯುವವರ ಸಂಖ್ಯೆ ಅಧಿಕವಾದಾಗ ಕುಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಶೀಘ್ರವಾಗಿ ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ, ವೈದ್ಯರು, ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದ ಶಾಸಕಿ, ದಾಖಲೆಗಳನ್ನು ಪರಿಶೀಲಿಸಿ, ಸಿಬ್ಬಂದಿಯಿಂದ ವಿವರ ಪಡೆದುಕೊಂಡರು. ಬಳಿಕ ತುರ್ತು ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.
ನಿಕಟಪೂರ್ವ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ನಿಕಟಪೂರ್ವ ಪಂಚಾಯಿತಿ ಸದಸ್ಯರಾದ ಭವಾನಿ ಶಂಕರ ಪೂಂಬಾಡಿ, ಗಿರೀಶ್ ಆಚಾರ್ಯ ಪೈಲಾಜೆ, ದಿಲೀಪ್ ಉಪ್ಪಳಿಕೆ, ಭಾರತಿ ದಿನೇಶ್, ಪ್ರಮುಖರಾದ ಪ್ರಸಾದ್ ಕಾಟೂರ್, ಅಶೋಕ್ ಕುಮಾರ್ ಮೂಲೆಮಜಲು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ರಾತ್ರಿಯೂ ಸೇವೆ ನೀಡಿ

ಜನತೆಗೆ ಅವಶ್ಯಕವಿರುವ ಚಿಕಿತ್ಸೆಯನ್ನು ಮೊದಲಿಗೆ ನೀಡಬೇಕು. ಹಗಲು ಮಾತ್ರವಲ್ಲದೆ ರಾತ್ರಿಯೂ ಸಿಬ್ಬಂದಿ ಲಭ್ಯವಿದ್ದು ಆರೋಗ್ಯ ಸೇವೆ ನೀಡಬೇಕು. ವಿಧಾನಸಭೆಯಲ್ಲಿ ಕುಕ್ಕೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಸ್ತಾವಿಸಿದಾಗ ಚಿಕಿತ್ಸೆ ಪಡೆಯುವ ಜನರು ಸಂಖ್ಯೆ ಕೇಳುತ್ತಾರೆ. ಆದುದರಿಂದ ವೈದ್ಯರು, ಸಿಬ್ಬಂದಿ ಉತ್ತಮ ಚಿಕಿತ್ಸೆ ನೀಡಿ ಜನರ ವಿಶ್ವಾಸ ಗಳಿಸಬೇಕು. ಆಗ ಆರೋಗ್ಯ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತದೆ ಎಂದು ಶಾಸಕಿ ಮುರುಳ್ಯ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net