ಸೇವಾ ಕಾರ್ಯಗಳ ದಾಖಲಾತಿಯೂ ಅಗತ್ಯ

ಉದ್ಯಾವರದಲ್ಲಿ ಫ್ರೆಂಡ್ಸ್​ ಸರ್ಕಲ್​ನ 'ಯುಎಫ್​ಸಿ ಮಾತುಕತೆ' ಸಂಚಿಕೆಯನ್ನು ರೋಯ್ಸ್​ ಮಾರ್ವಿನ್​ ಫೆರ್ನಾಂಡಿಸ್​ ಬಿಡುಗಡೆ ಮಾಡಿದರು. ಉದ್ಯಾವರ ನಾಗೇಶಕುಮಾರ್​, ರಿಯಾಝ್​ ಪಳ್ಳಿ, ಚಂದ್ರಾವತಿ ಎಸ್​. ಭಂಡಾರಿ, ಶರತ್​ ಕುಮಾರ್​, ಯು.ಪದ್ಮನಾಭ ಕಾಮತ್​, ಗಿರೀಶ್​ ಗುಡ್ಡೆಯಂಗಡಿ ಇದ್ದರು.
ಉದ್ಯಾವರದಲ್ಲಿ ಫ್ರೆಂಡ್ಸ್​ ಸರ್ಕಲ್​ನ 'ಯುಎಫ್​ಸಿ ಮಾತುಕತೆ' ಸಂಚಿಕೆಯನ್ನು ರೋಯ್ಸ್​ ಮಾರ್ವಿನ್​ ಫೆರ್ನಾಂಡಿಸ್​ ಬಿಡುಗಡೆ ಮಾಡಿದರು. ಉದ್ಯಾವರ ನಾಗೇಶಕುಮಾರ್​, ರಿಯಾಝ್​ ಪಳ್ಳಿ, ಚಂದ್ರಾವತಿ ಎಸ್​. ಭಂಡಾರಿ, ಶರತ್​ ಕುಮಾರ್​, ಯು.ಪದ್ಮನಾಭ ಕಾಮತ್​, ಗಿರೀಶ್​ ಗುಡ್ಡೆಯಂಗಡಿ ಇದ್ದರು.
Published on

* ರೋಯ್ಸ್​ ಮಾರ್ವಿನ್​ ಫೆರ್ನಾಂಡಿಸ್​ ಅಭಿಪ್ರಾಯ

* ಯುಎಫ್​ಸಿ ಮಾತುಕತೆ ಸಂಚಿಕೆ ಬಿಡುಗಡೆ

ಉಡುಪಿ: ಯಾವುದೇ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ದಾಖಲಾತಿಯೂ ಸಹ ಇಂದು ಪ್ರಮುಖವಾಗಿದೆ. ಅಲ್ಲದೆ, ಸಂಸ್ಥೆಗಳು ಮಾಡಿದ ಸಾಮಾಜಿಕ ಚಟುವಟಿಕೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ಹತ್ತು ವರ್ಷದಿಂದ ಪ್ರಕಟಿಸುತ್ತಿರುವ 'ಯುಎಫ್​ಸಿ ಮಾತುಕತೆ' ಸಂಚಿಕೆ ಮಹತ್ವದ್ದಾಗಿದೆ ಎಂದು ಉಡುಪಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ರೋಯ್ಸ್​ ಮಾರ್ವಿನ್​ ಫೆರ್ನಾಂಡಿಸ್​ ಅಭಿಪ್ರಾಯಪಟ್ಟರು.
ಉಡುಪಿಯ ಉದ್ಯಾವರದಲ್ಲಿ ಸೇವಾ ಮತ್ತು ಸಾಂಸತಿಕ ವೇದಿಕೆಯಾದ ಫ್ರೆಂಡ್ಸ್​ ಸರ್ಕಲ್​ ಉದ್ಯಾವರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಯುಎಫ್​ಸಿ ಮಾತುಕತೆ-2025' ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತಾಡಿದರು.

ಪ್ರಚಾರಕ್ಕಾಗಿ ಅಲ್ಲ

ವೇದಿಕೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​ ಮಾತನಾಡಿ, ನಮ್ಮ ಕೆಲಸ ಹಾಗೂ ಕೈಗೊಂಡ ಕಾರ್ಯಗಳು ಒಂದೆಡೆ ದಾಖಲಾಗಿ ಇರಲಿ ಎಂಬ ಕಾರಣಕ್ಕೆ ಸಂಚಿಕೆಪ್ರಕಟಿಸುತ್ತೇವೆ. ಯಾವುದೇ ಪ್ರಚಾರಕ್ಕಾಗಿ ಅಲ್ಲ. 10 ವರ್ಷದ ನಂತರ ಸಂಸ್ಥೆ ಮಾಡಿದ ಕೆಲಸದ ಬಗ್ಗೆ ಈ ಸಂಚಿಕೆ ಮಾಹಿತಿ ನೀಡಲಿದೆ. ಈ ಕಾರ್ಯ ಮುಂದುವರಿಯಲಿ ಎಂದರು.
ಮಾಜಿ ಅಧ್ಯಕ್ಷ ರಿಯಾಝ್​ ಪಳ್ಳಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಚಂದ್ರಾವತಿ ಎಸ್​. ಭಂಡಾರಿ , ಶರತ್​ ಕುಮಾರ್​, ಯು.ಪದ್ಮನಾಭ ಕಾಮತ್​  ಉಪಸ್ಥಿತರಿದ್ದರು. ಕೋಶಾಧಿಕಾರಿ ಸತೀಶ್​ ಡಿ. ಸಾಲ್ಯಾನ್​, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್​ , ಕಾರ್ಯದರ್ಶಿಗಳಾದ ಆಶಾ ವಾಸು, ಭಾಸ್ಕರ್​ ಬಂಗೇರ, ಮಾಜಿ ಅಧ್ಯಕ್ಷ ಅನುಪ್​ ಕುಮಾರ್​, ಸದಸ್ಯ ಲೋಕನಾಥ್​ ಬೊಳ್ಜೆ ಇತರರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್​ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತುಲ್ಲ ಕಾರ್ಯಕ್ರಮ ನಿರ್ವಹಿಸಿದರು.
"

ಉದ್ಯಾವರ ಗ್ರಾಮದಲ್ಲಿ ಜನಪರ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಈ ಸಂಸ್ಥೆ 50 ಸಂವತ್ಸರ ದಾಟಿರುವುದು ಹಾಗೂ ಜನರಿಂದಲೂ ಸೂಕ್ತ ಪ್ರೋತ್ಸಾಹ ಲಭಿಸುತ್ತಿರುವುದು ಸಂತಸ ವಿಚಾರ. ಆರೋಗ್ಯವಂತ ಮನಸ್ಸುಗಳನ್ನು ಒಂದಾಗಿಸಿ ಜಾತ್ಯತೀತವಾಗಿ ಈ ದುರಿತ ಕಾಲದಲ್ಲೂ ಕೆಲಸ ಮಾಡುವುದು ಸಾಹಸವೇ ಸರಿ.

— ರೋಯ್ಸ್​ ಮಾರ್ವಿನ್​ ಫೆರ್ನಾಂಡಿಸ್​. ಉಡುಪಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net