ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಸ್ವಾತಂತ್ರ್ಯ ರಕ್ಷಣೆ

 ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೊೃೀತ್ಸವದಲ್ಲಿ ಯೋಗೀಶ್ ಶೆಟ್ಟಿ, ಜಯರಾಮ ಆಚಾರ್ಯ, ಜಯ ಪೂಜಾರಿ, ದೇವರಾಜ್ ಸಂಜಯ್‌ಕುಮಾರ್, ಅನಸೂಯ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೊೃೀತ್ಸವದಲ್ಲಿ ಯೋಗೀಶ್ ಶೆಟ್ಟಿ, ಜಯರಾಮ ಆಚಾರ್ಯ, ಜಯ ಪೂಜಾರಿ, ದೇವರಾಜ್ ಸಂಜಯ್‌ಕುಮಾರ್, ಅನಸೂಯ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
Published on

ಪಡುಬಿದ್ರಿ: ನಾವು ನಮ್ಮ ಸ್ವಾತಂತ್ರ್ಯವನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ರಕ್ಷಿಸಿಕೊಳ್ಳಬೇಕು. 140 ಕೋಟಿ ಜನಸಂಖ್ಯೆಯ ಯುವಶಕ್ತಿಯೊಂದಿಗೆ ಆರ್ಥಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿ ಕುಮಾರ ಕೃಪದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಉಡುಪಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಯ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ದೇವರಾಜ್ ತೊಟ್ಟಂ, ಯುವ ಜನತಾದಳದ ಅಧ್ಯಕ್ಷ ಸಂಜಯ್ ಕುಮಾರ್, ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷೆ ಅನಸೂಯ ಶೆಟ್ಟಿ, ನಾಯಕರಾದ ಕೀರ್ತಿರಾಜ್, ಅಶ್ರಫ್ ಪಡುಬಿದ್ರಿ, ವಿನ್ಸೆಂಟ್ ಸುನೀಲ್ ಡಿ ಅಲ್ಮೇಡಾ, ಹರಿಣಿ ಆರ್.ಕೋಟ್ಯಾನ್, ಮಮತಾ, ರವೀಂದ್ರ ಶೆಟ್ಟಿ, ಪ್ರಶಾಂತ್ ಭಂಡಾರಿ, ಪ್ರಶಾಂತ್ ಸಾಲಿಯನ್, ಗೋಪಾಲ್ ಶೆಟ್ಟಿ, ರಂಗ ಕೋಟ್ಯಾನ್, ಚಂದನ್ ಕರಿಯಪ್ಪ, ಶಂಕರ್, ಅಶೋಕ್ ಕೆ., ಜ್ಯೋತಿ ಆರ್.ಅಶೋಕ್, ಶರತ್, ಜಯ ಪೂಜಾರಿ, ರವಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net