ಕಣ್ಣುಗಳ ಆರೈಕೆ, ರಕ್ಷಣೆ ಅತ್ಯಗತ್ಯ

ಆದಿಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಲ. ಶಾಲಿನಿ ಡಿ. ಬಂಗೇರ ಕನ್ನಡಕ ವಿತರಿಸಿದರು. ಪುಷ್ಪರಾಜ್​ ಶೆಟ್ಟಿ ಕೆ., ದಿಲೀಪ್​ ಶೆಟ್ಟಿ, ಸಂತೋಷ್​ ಶೆಟ್ಟಿ ಪಂಚರತ್ನ, ಡಾ. ಶಿಲ್ಪಾ, ಅಶ್ವಿನಿ ಶೆಟ್ಟಿ ಇದ್ದರು.
ಆದಿಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಲ. ಶಾಲಿನಿ ಡಿ. ಬಂಗೇರ ಕನ್ನಡಕ ವಿತರಿಸಿದರು. ಪುಷ್ಪರಾಜ್​ ಶೆಟ್ಟಿ ಕೆ., ದಿಲೀಪ್​ ಶೆಟ್ಟಿ, ಸಂತೋಷ್​ ಶೆಟ್ಟಿ ಪಂಚರತ್ನ, ಡಾ. ಶಿಲ್ಪಾ, ಅಶ್ವಿನಿ ಶೆಟ್ಟಿ ಇದ್ದರು.
Published on

* ಲ. ಶಾಲಿನಿ ಡಿ. ಬಂಗೇರ ಅನಿಸಿಕೆ

* ಫಲಾನುಭವಿಗಳಿಗೆ ಕನ್ನಡಕ ಉಚಿತ ವಿತರಣೆ

ಉಡುಪಿ: ದೇಹದ ಪ್ರತಿಯೊಂದು ಅಂಗವೂ ಪ್ರಮುಖವಾಗಿದ್ದು ಜಗತ್ತನ್ನು ನೋಡಬಲ್ಲ ಕಣ್ಣುಗಳಿಗೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಕಣ್ಣುಗಳ ಆರೈಕೆ, ರಕ್ಷಣೆಯೂ ಸಹ ಅತ್ಯಗತ್ಯವಾಗಿದೆ ಎಂದು ಜಿಲ್ಲೆ 317ಸಿ ಲಯನ್​ ಕ್ಯಾಬಿನೆಟ್​ ಸೆಕ್ರೆಟರಿ ಲ. ಶಾಲಿನಿ ಡಿ. ಬಂಗೇರ ಅನಿಸಿಕೆ ವ್ಯಕ್ತಪಡಿಸಿದರು. 
ಆದಿಉಡುಪಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬಂಟರ ಸಂಘ (ರಿ.) ಕಂಬಳಕಟ್ಟ ಕೊಡವೂರು, ಜೆಎಸ್​ಡಬ್ಲ್ಯು ಫೌಂಡೇಷನ್​ ಮಂಗಳೂರು, ಲಯನ್ಸ್​ ಕ್ಲಬ್​ ಉಡುಪಿ ಚೇತನ ಆಶ್ರಯದಲ್ಲಿ ಇಂಡಿಯಾ ವಿಷನ್​ ಇನ್​ಸ್ಟಿಟ್ಯೂಟ್​ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ ಮಾಡಿಸಿಕೊಂಡಿದ್ದ ಫಲಾನುಭವಿಗಳಿಗೆ ಕನ್ನಡಕ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಬಂಟರ ಸಂಘ (ರಿ.) ಕಂಬಳಕಟ್ಟದ ಅಧ್ಯಕ್ಷ ಪುಷ್ಪರಾಜ್​ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜೆಎಸ್​ಡಬ್ಲ್ಯು ಮಂಗಳೂರಿನ ಜನರಲ್​ ಮೆನೇಜರ್​ ದಿಲೀಪ್​ ಶೆಟ್ಟಿ, ಲಯನ್ಸ್​ ಕ್ಲಬ್​ ಉಡುಪಿ ಚೇತನ ಅಧ್ಯಕ್ಷ ಸಂತೋಷ್​ ಶೆಟ್ಟಿ ಪಂಚರತ್ನ, ಇಂಡಿಯಾ ವಿಷನ್​ ಇನ್​ಸ್ಟಿಟ್ಯೂಟ್​ನ ಡಾ. ಶಿಲ್ಪಾ, ಬಂಟರ ಸಂಘದ ಗೌರವಾಧ್ಯಕ್ಷೆ ಅಶ್ವಿನಿ ಶೆಟ್ಟಿ ಸಂತೆಕಟ್ಟೆ, ಕಾರ್ಯದರ್ಶಿ ವಿಜೇಶ್​ ಶೆಟ್ಟಿ ಜನ್ನಿಬೆಟ್ಟು, ನವೀನ್​ ಶೆಟ್ಟಿ ಪಡುಮನೆ, ಉಮೇಶ್​ ಶೆಟ್ಟಿ ದೊಡ್ಡಮನೆ, ರಮೇಶ್​ ಶೆಟ್ಟಿ ಮೂಡುಬೆಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಫಲಾನುಭವಿಗಳಿಗೆ ಕನ್ನಡಕ ವಿತರಿಸಲಾಯಿತು. ಸುರೇಶ್​ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್​ ಶೆಟ್ಟಿ ಮಜಲುಮನೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net