ಬ್ಯಾಂಕ್​ ಗ್ರಾಹಕರ ಆರೋಗ್ಯ ರಕ್ಷಣೆಗೂ ಆದ್ಯತೆ

ಉಡುಪಿ ಮಣಿಪಾಲದ ಎಸ್​ಬಿಐ ಶಾಖೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಕಾಶ್​ ಅಡಿಗ ಉದ್ಘಾಟಿಸಿದರು. ಡಾ. ಶಾಮಿನಿ, ಸುಧೀರ್​, ಕೃಷ್ಣರಾಜ್​ ಕೆ. ಭಟ್​, ಅಕ್ಷಯ್​ ಭಾಗವತ್​, ಶಿವಾ ರಾಜೀವ್​ ಇದ್ದರು.
ಉಡುಪಿ ಮಣಿಪಾಲದ ಎಸ್​ಬಿಐ ಶಾಖೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಕಾಶ್​ ಅಡಿಗ ಉದ್ಘಾಟಿಸಿದರು. ಡಾ. ಶಾಮಿನಿ, ಸುಧೀರ್​, ಕೃಷ್ಣರಾಜ್​ ಕೆ. ಭಟ್​, ಅಕ್ಷಯ್​ ಭಾಗವತ್​, ಶಿವಾ ರಾಜೀವ್​ ಇದ್ದರು.
Published on

* ಎಸ್​ಬಿಐ ಉಡುಪಿ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್​ ಅಡಿಗ ಭರವಸೆ

* ಎಸ್​ಬಿಐ ಮಣಿಪಾಲ ಶಾಖೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಬ್ಯಾಂಕ್​ನೊಂದಿಗೆ ವ್ಯವಹಾರ ನಡೆಸುವ ಎಲ್ಲ ಗ್ರಾಹಕರ ಹಿತವೂ ನಮಗೆ ಪ್ರಮುಖ. ಹೀಗಾಗಿ ಬ್ಯಾಂಕಿಂಗ್​ ಸೇವೆಯ ಜತೆಗೆ ಗ್ರಾಹಕರು ಮತ್ತು ಸಮಾಜದ ಆರೋಗ್ಯ ರಕ್ಷಣೆಗೂ ಎಸ್​ಬಿಐ ಆದ್ಯತೆ ನೀಡುತ್ತದೆ ಎಂದು ಉಡುಪಿ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಪ್ರಕಾಶ್​ ಅಡಿಗ ತಿಳಿಸಿದರು.
ಮಣಿಪಾಲದ ಶಾಖೆಯ ಆವರಣದಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ಮಾಹೆ ವಿದ್ಯಾರ್ಥಿಗಳು ಮತ್ತು ಮಣಿಪಾಲ ಶಾಖೆಯ ಗ್ರಾಹಕರಿಗಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಣಿಪಾಲ ಕೆಎಂಸಿ ಡೆಂಟಲ್​ ವಿಭಾಗದ ಸಹಕಾರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಾಮಿನಿ, ಎನ್​ಆರ್​ಐ ಗ್ರಾಹಕ ಸುಧೀರ್​, ಮುಖ್ಯ ವ್ಯವಸ್ಥಾಪಕರಾದ ಕೃಷ್ಣರಾಜ್​ ಕೆ. ಭಟ್​, ಅಕ್ಷಯ್​ ಭಾಗವತ್​, ಮಣಿಪಾಲ ಶಾಖೆಯ ಉಪ ವ್ಯವಸ್ಥಾಪಕ ಶಿವಾ ರಾಜೀವ್​ ಮತ್ತು ಗ್ರಾಹಕರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಪರೀಕ್ಷೆ, ದಂತ ತಪಾಸಣೆ, ಬಿಎಂಐ ಮತ್ತು ವೈದ್ಯರಿಂದ ಸಲಹೆ ನೀಡಲಾಯಿತು. ನೂರಾರು ಜನರು ಪ್ರಯೋಜನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net