ಸೇವೆ ಅರ್ಹರಿಗೆ ತಲುಪಿದರೆ ಶಿಬಿರ ಯಶ

ಕಣ್ಣಿನ ತಪಾಸಣಾ ಉಚಿತ ಶಿಬಿರವನ್ನು ಮನೋರೋಗ ತಜ್ಞ ಡಾ.ಕೆ.ಎಸ್ ಕಾರಂತ್ ಉದ್ಘಾಟಿಸಿದರು. ಪ್ರಮುಖರಾದ ನಾಗರತ್ನಾ, ರಾಮ ಖಾರ್ವಿ, ಗಿರಿಜಾ ಪೂಜಾರ್ತಿ ಮತ್ತಿತರರಿದ್ದರು.
ಕಣ್ಣಿನ ತಪಾಸಣಾ ಉಚಿತ ಶಿಬಿರವನ್ನು ಮನೋರೋಗ ತಜ್ಞ ಡಾ.ಕೆ.ಎಸ್ ಕಾರಂತ್ ಉದ್ಘಾಟಿಸಿದರು. ಪ್ರಮುಖರಾದ ನಾಗರತ್ನಾ, ರಾಮ ಖಾರ್ವಿ, ಗಿರಿಜಾ ಪೂಜಾರ್ತಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ 24ನೇ ವಾರ್ಷಿಕೋತ್ಸವ
  • ಕಣ್ಣಿನ ತಪಾಸಣಾ ಉಚಿತ ಶಿಬಿರ
ಕೋಟ: ಆರೋಗ್ಯ ಶಿಬಿರಗಳನ್ನು ನಡಿಸುವುದು ಮಾತ್ರವಲ್ಲದೆ ಸೇವೆಯನ್ನು ಅರ್ಹ ವ್ಯಕ್ತಿಗಳಿಗೆ ತಲುಪಿಸುವ ಕೆಲಸವಾಗಬೇಕು ಹಾಗೂ ಅದರ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳುವುದರ ಮೂಲಕ ಉಚಿತ ಶಿಬಿರಗಳು ಯಶಸ್ವಿಯಾಗಬೇಕು ಎಂದು ಮನೋರೋಗ ತಜ್ಞ ಡಾ.ಕೆ.ಎಸ್ ಕಾರಂತ್ ಹೇಳಿದರು.
ಕೋಡಿತಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ 24ನೇ ವಾರ್ಷಿಕೋತ್ಸವ ಪ್ರಯುಕ್ತ ಉಡುಪಿ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾದ ಕಣ್ಣಿನ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೋಡಿ ಶಾಲೆ ಮುಖ್ಯಶಿಕ್ಷಕಿ ನಾಗರತ್ನಾ, ಎಸ್‌ಡಿಎಂಸಿ ಅಧ್ಯಕ್ಷ ರಾಮ ಖಾರ್ವಿ, ಹಿರಿಯರಾದ ಗಿರಿಜಾ ಪೂಜಾರ್ತಿ, ಪ್ರಸಾದ್ ನೇತ್ರಾಲಯ ಸಂಪರ್ಕಾಧಿಕಾರಿ ಗಣೇಶ್, ಅಧ್ಯಾಪಕಿ ಹೇಮಾ, ಸುಪ್ರೀತಾ, ಪಂಚಶಕ್ತಿ ಸಂಘದ ಅಧ್ಯಕ್ಷ ಪ್ರವೀಣ್ ಖಾರ್ವಿ, ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ, ಕಾರ್ಯದರ್ಶಿ ಸಂದೀಪ್ ಖಾರ್ವಿ, ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ ಖಾರ್ವಿ, ಸಂದೇಶ್, ಅನಿಲ, ಸಂದೀಪ, ವಿಕೇಶ್ ಬಂಗೇರ, ದಿನೇಶ್, ಪ್ರವೀಣ್, ವಿಜಯ ಖಾರ್ವಿ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net