ನೇತ್ರ, ಆರೋಗ್ಯ ಶಿಬಿರ ಕಾರ್ಯಾಗಾರ

ಕುಂದಾಪುರ ಪೊಲೀಸ್ ಲೈನ್‌ನ ಶ್ರೀ ರಕ್ತೇಶ್ವರಿ ಹಾಲ್‌ನಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರ ಕಾರ್ಯಾಗಾರ ನಡೆಯಿತು.
ಕುಂದಾಪುರ ಪೊಲೀಸ್ ಲೈನ್‌ನ ಶ್ರೀ ರಕ್ತೇಶ್ವರಿ ಹಾಲ್‌ನಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರ ಕಾರ್ಯಾಗಾರ ನಡೆಯಿತು.
Published on
ಕುಂದಾಪುರ: ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಕುಂದಾಪುರ ಪೊಲೀಸ್ ಠಾಣೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ಬಾರ್ ಅಸೋಸಿಯೇಷನ್, ಅಭಿಯೋಗ ಇಲಾಖೆ, ಉಡುಪಿ ಪ್ರಸಾದ್ ನೇತ್ರಾಲಯ, ಉಡುಪಿ ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ಒನ್ ಸೈಟ್ ಎಸೈಲಾರ್ ಲಕ್ಸೋಟಿಕ ಫೌಂಡೇಶನ್ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆ ಸಹಭಾಗಿತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಖಾಸಗಿ ಬಸ್, ಸ್ಕೂಲ್ ಬಸ್, ಟೆಂಪೋ, ರಿಕ್ಷಾ ಹಾಗೂ ಇತರ ವಾಹನ ಚಾಲಕರಿಗೆ ನೇತ್ರ ಉಚಿತ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರ ಕಾರ್ಯಾಗಾರ ಕುಂದಾಪುರ ಪೊಲೀಸ್ ಲೈನ್‌ನ ಶ್ರೀ ರಕ್ತೇಶ್ವರಿ ಹಾಲ್‌ನಲ್ಲಿ ಗುರುವಾರ ನಡೆಯಿತು.
ಕುಂದಾಪುರ ವೃತ್ತದ ಪೊಲೀಸ್ ನಿರೀಕ್ಷಕ ಜಯರಾಮ್ ಡಿ.ಗೌಡ, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಅನೂಪ್ ನಾಯಕ್ ಮತ್ತು ಸುಧಾ ಪ್ರಭು, ಪ್ರಸಾದ ನೇತ್ರಾಲಯದ ನೇತ್ರ ತಜ್ಞೆ ಡಾ.ಕ್ರೀನಾ, ಪಿಆರ್‌ಒ ಮೋಹನದಾಸ್, ಕುಂದಾಪುರ ತಾಲೂಕು ಆಸ್ಪತ್ರೆ ಸಿಎಚ್‌ಒ ಮೇಧಿನಿ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧಿಕಾರಿಗಳಾದ ಗಾಯಿತ್ರಿ, ರಮೀಜಾ ಮೊದಲಾದವರು ಉಪಸ್ಥಿತರಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಮಧುಸೂಧನ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net