ಉಡುಪಿಯ ಕಾಡಬೆಟ್ಟು ಟಿ.ಎ. ಪೈ ಮೋಡರ್ನ್ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು. ರಮೇಶ್ ತಿಂಗಳಾಯ, ಎಚ್.ಆರ್. ಶೆಣೈ, ಪೂರ್ಣಿಮಾ ಶೆಟ್ಟಿ, ಯು.ರಾಮಪ್ಪ, ನಾರಾಯಣ ಭಂಡಾರಿ, ಹರೀಶ್ ಪೂಜಾರಿ, ಸುಲೋಚನಾ ಇತರರಿದ್ದರು.
Published on:
Copied
Follow Us
* ಸಮಾಜ ಸೇವಕ ರಮೇಶ್ ತಿಂಗಳಾಯ ಅನಿಸಿಕೆ
* ಕಾಡಬೆಟ್ಟು ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ
ಉಡುಪಿ: ವಿದ್ಯಾರ್ಥಿಗಳ ಬ್ಯಾಗ್ನೊಳಗೆ ಅವರ ಮುಂದಿನ ಭವಿಷ್ಯ ಅಡಗಿದೆ. ಹೀಗಾಗಿ ಮುಂದಿನ ರ್ನಿದಿಷ್ಟ ಗುರಿಯೊಂದಿಗೆ ಭವಿಷ್ಯದ ಜವಾಬ್ದಾರಿಯನ್ನು ತುಂಬಿಸಿಕೊಳ್ಳಬೇಕು. ಅದಕ್ಕೆಂದೇ ದಾನಿಗಳು ತಮಗೆ ಉಚಿತವಾಗಿ ಬ್ಯಾಗ್ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ತಿಂಗಳಾಯ ಕಿವಿಮಾತು ಹೇಳಿದರು.
ಉಡುಪಿಯ ಕಾಡಬೆಟ್ಟಿನಲ್ಲಿರುವ ಟಿ.ಎ. ಪೈ ಮೋಡರ್ನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸುದೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಾಗೂ ಸೌದಿ ಅರೇಬಿಯಾದ ರಿಯಾದ್ ಗ್ರೂಪ್ ಹಾಗೂ ಲಿಟ್ಲ್ ಪೈ ಮಾಲೀಕ ಐರೋಡಿ ಗಿರಿಧರ್ ಪೈ ಅವರ ಸಹಕಾರದಲ್ಲಿ 150 ಬ್ಯಾಗ್ಗಳನ್ನು ಶಾಲಾ ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಶಾಲೆಯ ಮೆನೇಜಿಂಗ್ ಟ್ರಸ್ಟಿ ಎಚ್.ಆರ್. ಶೆಣೈ, ವಸುದೈವ ಕುಟುಂಬಕಂನ ಟ್ರಸ್ಟಿ ಪೂರ್ಣಿಮಾ ಶೆಟ್ಟಿ, ಯುಕ್ತಿ ಲಯನ್ಸ್ ಕ್ಲಬ್ನ ಯು.ರಾಮಪ್ಪ, ಈಶ್ವರ್ ಮಲ್ಪೆ ತಂಡದ ಹರೀಶ್ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಟ್ರಸ್ಟಿ ಶಿವಪ್ರಸಾದ್, ಹಳೆಯ ವಿದ್ಯಾರ್ಥಿ ಅಶೋಕ್ ಶೆಟ್ಟಿ, ವಸುದೈವ ಕುಟುಂಬಕಂನ ಸದಸ್ಯರಾದ ಲತಾ ಭಟ್,ದ ಶರಥ್ ಸಿಂಗ್, ರಾಮಪ್ಪ ಸಾಲ್ಯಾನ್, ವತ್ಸಲಾ ಕೋಟ್ಯಾನ್, ಉಪ್ಪೂರಿನ ಸ್ಪಂದನಾ ಆಶ್ರಮದ ಜನಾರ್ದನ್ ಪಾಲ್ಗೊಂಡಿದ್ದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಲೋಚನಾ ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.