ವಿಲ್ಲಿಯಮ್ ಪಾವ್ಲ್ ಕೊರೆ ಎಂಬುವರಿಗೆ ಜುಲೈ 28ರಂದು ಮಧ್ಯಾಹ್ನ 2ರ ಸುಮಾರಿಗೆ ಅಪರಿಚಿತನೊಬ್ಬ ಮೊಬೈಲ್ ಕರೆ ಮಾಡಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡಿ, ನಿಮ್ಮ ಹೆಸರಿನಲ್ಲಿ ಒಂದು ಸಿಮ್ ಕಾರ್ಡ್ ಇಶ್ಯೂ ಆಗಿದ್ದು, ಈ ನಂಬರ್ ಮೇಲೆ 20 ಕೇಸ್‌ಗಳು ದಾಖಲಾಗಿವೆ. ನೀವು ಜೆಸ್ಸಿ ಮೊಹಮ್ಮದ್ ಎಂಬುವರ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾನೆ.