ಅಮೆಜಾನ್​ ಫ್ರಾಂಚೈಸಿ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ

AI ಚಿತ್ರ
AI ಚಿತ್ರ
Published on
ಉಡುಪಿ: ಅಮೆಜಾನ್​ ಕಂಪನಿಯ ಆನ್​ಲೈನ್​ ಹಬ್​ ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ, ಹಣ ಪಡೆದು ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ನಾಲ್ಕೂರು ಗ್ರಾಮದ ನಿವಾಸಿ ರವಿಚಂದ್ರ (48) ವಂಚನೆಗೊಳಗಾದವರು. ಸಾಯಿಕೃಷ್ಣ ಎಂಬಾತ ರವಿಚಂದ್ರ ಅವರಿಗೆ ಕರೆ ಮಾಡಿ, ಉಡುಪಿ-&ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್​ನಲ್ಲಿ ಅಮೆಜಾನ್​ ಆನ್​ಲೈನ್​ ಹಬ್​ ಫ್ರಾಂಚೈಸಿ ಮಾಡಿಸಿಕೊಡುವುದಾಗಿ ತಿಳಿಸಿದ್ದ. ಪ್ರಾರಂಭದಲ್ಲಿ ರಿಜಿಸ್ಟ್ರೆಶನ್​ ಮಾತ್ರ ಆನ್​ಲೈನ್​ನಲ್ಲಿ ಮಾಡಿಕೊಳ್ಳಬೇಕು. ಬಳಿಕ ಕಂಪನಿಯ ಫೀಲ್ಡ್​ ಆಫೀಸರ್​ ಸ್ಥಳಕ್ಕೆ ಭೇಟಿ ನೀಡಿ ಒಪ್ಪಂದ ಹಾಗೂ ಏರಿಯಾ ಪಿನ್​ ಕೋಡ್​ ಲಾಕಿಂಗ್​ ಮಾಡಿಕೊಡಲಿದ್ದಾರೆ ಎಂದು ನಂಬಿಸಿದ್ದ. ಆರೋಪಿಗಳ ಮಾತು ನಂಬಿದ ದೂರುದಾರರಿಂದ ಹಂತ ಹಂತವಾಗಿ ಒಟ್ಟು 4.20 ಲಕ್ಷ- ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಫ್ರಾಂಚೈಸಿಯನ್ನೂ ನೀಡದೆ ಹಣವನ್ನೂ ಮರಳಿಸದೆ ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಎಂ. ಸಾಯಿಕೃಷ್ಣ, ಎಂ. ಗುರುಸ್ವಾಮಿ, ಸುರೇಶ್​ ಕುಮಾರ್​, ರಾಜ್​ ಕುಮಾರ್​ ಹಾಗೂ ಮಹೇಶ್​ ಎಂಬ ಐವರು ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net