ಭಾಸವರಾಜ ಆರೋಪಿ ಶಾಮೀರ್‌ಗೆ ಲಾರಿ ಮಾರಾಟ ಮಾಡಿದ್ದು, 35 ಸಾವಿರ ರೂ.ಗಳನ್ನು ಚೆಕ್ ರೂಪದಲ್ಲಿ ಹಾಗೂ 20 ಸಾವಿರ ರೂ. ನಗದಾಗಿ ನೀಡಿದ್ದು, ಉಳಿದ ಹಣವನ್ನು ನಂತರ ಕೊಡುತ್ತೇನೆ ಎಂದು ಮೌಖಿಕ ಒಪ್ಪಂದ ಮಾಡಿಕೊಂಡು ಲಾರಿಯನ್ನು ತನ್ನ ಸ್ವಾಧೀನಕ್ಕೆ ಪಡೆದಿದ್ದರು. ನಂತರ ಮೌಖಿಕ ಒಪ್ಪಂದ ಮಾಡಿಕೊಂಡಂತೆ ಬಾಕಿ ಹಣ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ಭಾಸವರಾಜ ತಿಳಿಸಿದ್ದಾರೆ.