ಕಾರು ಅಪಘಾತಕ್ಕೆ ನಾಲ್ವರು ವಿದ್ಯಾರ್ಥಿಗಳು ಬಲಿ

Accident
Accident
Published on
ಕಾಸರಗೋಡು: ಕಣ್ಣೂರು ಸಮೀಪದ ಮಟ್ಟನ್ನೂರು ಕೂಟಾಯಿಯಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದು ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ನೀಲೇಶ್ವರ ನಿವಾಸಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅವರೆಲ್ಲರೂ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು.
ನೀಲೇಶ್ವರ ಮಡಿಕೈಕಂಡಂ ಕುಟ್ಟಿಚ್ಚಾಲ್ ನಿವಾಸಿ ರಿಜ್ವಾನ್ (21), ಕಣ್ಣೂರು ಅಲವಿಲ್ ಕಾಲನಿಯ ಗೇಟ್ ಮನ್ನತ್ತಿಲ್ ನಿವಾಸಿ ಮೊಯ್ದೀನ್ ಎಂಬುವರ ಪುತ್ರ ಶಾನ್ ಸಿರಾಜ್ (21), ನವದೆಹಲಿಯ ಪರಂ ಹೈಸ್ರಿ (21) ಮತ್ತು ಹೈದರಾಬಾದ್‌ನ ಹರ್ಷ್‌ಕಸ್ತೂರಿ (21) ಮೃತರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರಿಶೂರ್ ನಿವಾಸಿ ಆದಿತ್ಯ ಕೃಷ್ಣದೀಪ್ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾನ್ ಸಿರಾಜ್‌ನ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾಲ್ವರು ಕಾರಿನಲ್ಲಿ ಕಣ್ಣೂರಿಗೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿಶಾಮಕ, ಪೊಲೀಸ್ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದರು. ಮಟ್ಟನ್ನೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net