ವಿದ್ಯಾರ್ಥಿ ಕೇಂದ್ರಿತ ನಾಲ್ಕು ಹೊಸ ಸೌಲಭ್ಯ ಉದ್ಘಾಟನೆ

ವಿದ್ಯಾರ್ಥಿ ಚಟುವಟಿಕಾ ಕೇಂದ್ರವನ್ನು ಶ್ರೀ ಸೋದೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ರತ್ನ ಕುವಾರ್, ಶ್ರೀನಿವಾಸ ತಂತ್ರಿ, ಹರೀಶ್ ಬೆಳ್ಮಣ್ ಮೊದಲಾದವರಿದ್ದರು.
ವಿದ್ಯಾರ್ಥಿ ಚಟುವಟಿಕಾ ಕೇಂದ್ರವನ್ನು ಶ್ರೀ ಸೋದೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ರತ್ನ ಕುವಾರ್, ಶ್ರೀನಿವಾಸ ತಂತ್ರಿ, ಹರೀಶ್ ಬೆಳ್ಮಣ್ ಮೊದಲಾದವರಿದ್ದರು.
Published on


ಶಿರ್ವ:ಬಂಟಕಲ್ಲುಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಸಮಗ್ರ ಅಭಿವೃದ್ಧಿ ದೃಷ್ಟಿಯಿಂದವಿದ್ಯಾರ್ಥಿ ಕೇಂದ್ರಿತ ನಾಲ್ಕುಮಹತ್ವದ ಹೊಸ ಸೌಲಭ್ಯಗಳನ್ನುಅಳವಡಿಸಲಾಗಿದೆ.ಇವ್ಯಾಜಿನೇಟರ್ಸ್ಗ್ಯಾಲರಿ,ಕ್ರಿಕೆಟ್ನೆಟ್ ಅಭ್ಯಾಸ ಪಿಚ್,ಮೌಲ್ಯವಾಪನಕೇಂದ್ರ ಮತ್ತು ಬಹು ನಿರೀಕ್ಷಿತವಿದ್ಯಾರ್ಥಿ ಚಟುವಟಿಕಾ ಕೇಂದ್ರವನ್ನುಶ್ರೀ ಸೋದೆ ಶಿಕ್ಷಣ ಸಂಸ್ಥೆಗಳಅಧ್ಯಕ್ಷ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಇತ್ತೀಚೆಗೆಉದ್ಘಾಟಿಸಿದರು.

ಇವ್ಯಾಜಿನೇಟರ್ಸ್ಗ್ಯಾಲರಿಯಲ್ಲಿ ವಿದ್ಯಾರ್ಥಿಗಳು,ಸಿಬ್ಬಂದಿತಯಾರಿಸಿದ ಅತ್ಯುತ್ತಮ ಕಲಾಕೃತಿಗಳು,ಉತ್ಪನ್ನಗಳು,ಚಿತ್ರಕಲೆ,ಉಪಕರಣಗಳುಮತ್ತು ನವೀನ ಯೋಜನೆಗಳನ್ನುಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ.ಇದುಕಲೆ ಮತ್ತು ತಾಂತ್ರಿಕ ಕೌಶಲ್ಯವನ್ನುಪ್ರೋತ್ಸಾಹಿಸುವ ವೇದಿಕೆಯಾಗಿದೆ.ಮೌಲ್ಯವಾಪನಕೇಂದ್ರವು ಪರೀಕ್ಷಾ ಚಟುವಟಿಕೆಗೆಸಂಬಂಧಿಸಿದ ಎಲ್ಲ ಅಗತ್ಯ ಸೌಲಭ್ಯಗಳನ್ನುಒದಗಿಸಲಿದೆ.ಸೋದೆಸಮೂಹ ಸಂಸ್ಥೆಗಳ ಪ್ರತಿಭಾವಂತಕ್ರಿಕೆಟ್ ಆಟಗಾರರಿಗೆ ವೃತ್ತಿಪರಕ್ರಿಕೆಟ್ ಅಭ್ಯಾಸಕ್ಕೆ ಕ್ರಿಕೆಟ್ನೆಟ್ ಅಭ್ಯಾಸ ಪಿಚ್ ವೇದಿಕೆಒದಗಿಸುತ್ತದೆ.ಆಧುನಿಕಸೌಲಭ್ಯಗಳಿಂದ ಕೂಡಿದ ವಿದ್ಯಾರ್ಥಿಚಟುವಟಿಕಾ ಕೇಂದ್ರವು ವಿದ್ಯಾರ್ಥಿಗಳಪಠ್ಯ,ಪಠ್ಯೇತರಚಟುವಟಿಕೆಯನ್ನು ನಡೆಸುವ ಉದ್ದೇಶದಿಂದಮತ್ತು ಯೋಜನೆಗಳ ಅಭಿವೃದ್ಧಿಗೆಅಗತ್ಯವಿರುವ ಸಂಪನ್ಮೂಲಗಳು ಹಾಗೂವಿಶಾಲವಾದ ಕೊಠಡಿಯನ್ನು ನಿರ್ಮಿಸಲಾಗಿದೆಎಂದು ಶ್ರೀಗಳು ಮಾಹಿತಿ ನೀಡಿದರು.

ಸಂಸ್ಥೆಕಾರ್ಯದರ್ಶಿ ರತ್ನ ಕುವಾರ್,ಉಪಾಧ್ಯಕ್ಷಶ್ರೀನಿವಾಸ ತಂತ್ರಿ,ಆಡಳಿತಮಂಡಳಿ ಸದಸ್ಯ ಹರೀಶ್ ಬೆಳ್ಮಣ್,ಸೋದೆಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಉಪಸ್ಥಿತರಿದ್ದರು.ಪ್ರಾಂಶುಪಾಲಡಾ.ನಾಗರಾಜ್ಭಟ್ ಸ್ವಾಗತಿಸಿದರು.

ವಿದ್ಯಾಲಯದಲ್ಲಿ ಆರಂಭಿಸಿರುವ ಹೊಸ ಸೌಲಭ್ಯಗಳು ವಿದ್ಯಾರ್ಥಿಗಳ ಪಠ್ಯ ಮತ್ತು ಸಹ ಪಠ್ಯೇತರ ಚಟುವಟಿಕೆಗಳ ಜತೆಗೆ ದೈಹಿಕ ಕ್ಷಮತೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗಾಗಿ ಈ ಸೌಲಭ್ಯಗಳ ಪ್ರಯೋಜನ ಪಡೆಯಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net