ಜೂಜಾಟ ನಿರತ ನಾಲ್ವರ ಬಂಧನ

Arrest
Arrest
Published on

ಕಾಸರಗೋಡು:

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಂಗೇರಡ್ಕ ಅಂಗನವಾಡಿ ಆಸುಪಾಸು ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಿಗೆ ಬಳಸಿದ್ದರೆನ್ನಲಾದ 13,700 ರೂ. ನಗದು ವಶಕ್ಕೆ ಪಡೆಯಲಾಗಿದೆ.

ಕುಂಟಂಗೇರಡ್ಕ ನಿವಾಸಿಗಳಾದ ಕೆ.ಮುರುಗೇಶ, ಅಜಿತ್, ಕಣ್ಣೂರು ಎಡಕ್ಕಾಡ್ ನಿವಾಸಿ ಎನ್.ಪಿ.ದೀವೇಶ್, ಕಣ್ಣಾಪುರಂ ನಿವಾಸಿ ಎನ್. ನಾಗೇಶ್ ಬಂಧಿತರು. ಈ ಪ್ರದೇಶದಲ್ಲಿ ಜೂಜಾಟ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಎಸ್.ಐ. ಕೆ.ಪಿ.ಗಣೇಶನ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net