ಮೊಬೈಲ್​ನಿಂದ ಮಕ್ಕಳನ್ನು ದೂರವಿಡಿ

ಉಡುಪಿಯ ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಕೆ.ಅಣ್ಣಪ್ಪ ಶೆಣೈ ಮಾತನಾಡಿದರು. ಡಾ. ವಿಶ್ವನಾಥ ಪೈ ಎಂ., ಯು.ಕಲ್ಯಾಣಿ ಪೈ, ದಯಾನಂದ್​ ಕೋಟ್ಯಾನ್​, ನಿಶಾ ಇದ್ದರು.
ಉಡುಪಿಯ ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಕೆ.ಅಣ್ಣಪ್ಪ ಶೆಣೈ ಮಾತನಾಡಿದರು. ಡಾ. ವಿಶ್ವನಾಥ ಪೈ ಎಂ., ಯು.ಕಲ್ಯಾಣಿ ಪೈ, ದಯಾನಂದ್​ ಕೋಟ್ಯಾನ್​, ನಿಶಾ ಇದ್ದರು.
Published on

* ಪಾಲಕರಿಗೆ ಡಾ. ವಿಶ್ವನಾಥ ಪೈ ಎಂ. ಸಲಹೆ 

* ವಾಸುದೇವ ಕೃಪಾ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಉಡುಪಿ: ನಾವುಗಳು ಬಾಲ್ಯದಲ್ಲಿರುವಾಗ ಪಂಚತಂತ್ರ, ಚಂದಮಾಮ, ಬಾಲಮಿತ್ರದಂತಹ ಪುಸ್ತಕ ಹಾಗೂ ಇನ್ನಿತರ ನೀತಿ ಕಥೆಗಳನ್ನು ಓದುತ್ತಿದ್ದೆವು. ಅಂದಿನ ಪಾಲಕರೂ ಸಹ ಮಕ್ಕಳಲ್ಲಿ ಹೆಚ್ಚು ಸಂಸ್ಕಾರ ಬೆಳೆಸುತ್ತಿದ್ದರು. ಆದರೆ, ಇಂದಿನ ಪಾಲಕರು&ಮಕ್ಕಳು ಮೊಬೈಲ್​ನಲ್ಲಿ ಮುಳುಗಿರುತ್ತಾರೆ. ಬೇರೆಯವರ ಬಳಿ ಮಾತನಾಡುವಾಗ, ಊಟ ಮಾಡುವಾಗಲೂ ಮೊಬೈಲ್​ ಬೇಕೇಬೇಕು. ಮೊಬೈಲ್​ನಿಂದ ಮಕ್ಕಳನ್ನು ದೂರವಿಡಿ ಎಂದು ಉಡುಪಿ ಎಂಜಿಎಂ ಕಾಲೇಜಿನ ಸಹ ಪ್ರಾಂಶುಪಾಲ ಡಾ. ವಿಶ್ವನಾಥ ಪೈ ಎಂ. ಪಾಲಕರಿಗೆ ಸಲಹೆ ನೀಡಿದರು. 
ಉಡುಪಿ ಬೈಲೂರಿನಲ್ಲಿರುವ ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (ಜು.3) ಆಯೋಜಿಸಿದ್ದ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಸಂಸ್ಥಾಪಕ ಡಾ. ಟಿಎಂಎ ಪೈ ಹಾಗೂ ಸ್ಥಳದಾನಿ ವಾಸುದೇವ ರಾವ್​ ಬೈಲೂರು ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕಿ ಯು.ಕಲ್ಯಾಣಿ ಪೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ್​ ಕೋಟ್ಯಾನ್​, ಮುಖ್ಯ ಶಿಕ್ಷಕಿ ನಿಶಾ ಉಪಸ್ಥಿತರಿದ್ದರು. 
ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಪಾಲಕರು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಾದ ಆರಾಧ್ಯಾ, ದರ್ಶ್​ ದೀಪಕ್​ ಕುಮಾರ್​, ವೈಭವಿ ಕಾರ್ಯಕ್ರಮ ನಿರ್ವಹಿಸಿದರು.
"

ಮಣ್ಣುಪಳ್ಳವೆಂಬ ಕುಗ್ರಾಮ ಇಂದಿನ ಮಣಿಪಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹಾಗೂ ಸಾಧನೆ ಮಾಡುವಲ್ಲಿ ಪದ್ಮಶ್ರೀ ಡಾ. ತೋನ್ಸೆ ಮಾಧವ ಅನಂತ ಪೈ ಕಾರಣರಾಗಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು. ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು. ಅದೃಷ್ಟಶಾಲಿಗಳು. ಚೆನ್ನಾಗಿ ಓದಿ ಶಾಲೆಯ ಹಾಗೂ ದೇಶದ ಕೀರ್ತಿ ಹೆಚ್ಚಿಸಬೇಕು.

— ಕೆ.ಅಣ್ಣಪ್ಪ ಶೆಣೈ. ಶಾಲಾ ಸಂಚಾಲಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net