ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ: ಪಲಿಮಾರು ಶ್ರೀ

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾದ್ವಿ-ಮಾದ್ವಿ ಪಾಠಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾದ್ವಿ-ಮಾದ್ವಿ ಪಾಠಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
Published on

ಉಡುಪಿ: ಸಂಸ್ಕಾರಯುತ ಶಿಕ್ಷಣ ಇಂದಿನ ದೇಶಕ್ಕೆ ಪ್ರಸ್ತುತ ಅಗತ್ಯವಾಗಿದ್ದು, ಧರ್ಮಾತೀತವಲ್ಲದ ಧರ್ಮಾನ್ವಿತ ಶಾಲೆ ಸನಾತನ ಸಂಸತಿ ಮತ್ತು ಸಂಸತವನ್ನು ಕಲಿಸಿಕೊಡಲಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಮಣಿಪುರ&ದೆಂದೂರುಕಟ್ಟೆ ಬಳಿ ಪಲಿಮಾರು ಮಠದ ವತಿಯಿಂದ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಾದ್ವಿ-ಮಾದ್ವಿ ಪಾಠಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಅಶೀರ್ವಚನ ನೀಡಿದರು.

ಇಂದಿನ ದಿನಮಾನದಲ್ಲಿ ಹೆಣ್ಮಕ್ಕಳಿಗೂ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ. ತಾಯಿ ಸುಸಂಸ್ಕೃತರಾಗಿದ್ದರೆ ಮಕ್ಕಳ ಮೇಲೂ ಪ್ರಭಾವವಿರುತ್ತದೆ. ತಾಯಿ ಭಾಷೆಯಲ್ಲಿ ಮಗು ಸಮಾಜವನ್ನು ಗುರುತಿಸುತ್ತದೆ. ಸುಸಂಸ್ಕೃತ ಹೆಣ್ಮಕ್ಕಳಿಂದ ಧರ್ಮ ಬೆಳೆಯುತ್ತದೆ. ಇದರಿಂದ ಉತ್ತಮ ಜನಾಂಗ ಸೃಷ್ಟಿ ಸಾಧ್ಯ ಎಂದರು. ಸಂಸ್ಕೃತವನ್ನು ವಿರೋಧಿಸುವ ಕಾಲಟ್ಟದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಕಾರ್ಯ ಮಾಡುತ್ತಿದ್ದೇವೆ. ಇದಕ್ಕೆ ಸಮಾಜದ ಪೂರ್ಣ ಸಹಕಾರ ಅಗತ್ಯ ಎಂದರು.

ಶಾಸಕ ಗುರ್ಮೆ ಸುರೇಶ್​ ಶೆಟ್ಟಿ , ಟಿಸಿಎಸ್​ ಗ್ಲೋಬಲ್​ ಹೆಡ್​ ವೆಂಗುಸ್ವಾಮಿ ರಾಮಸ್ವಾಮಿ, ಕರ್ಣಾಟಕ ಬ್ಯಾಂಕ್​ ಎಂಡಿ ರಾಘವೇಂದ್ರ ಭಟ್​, ಅದಾನಿ ಗ್ರೂಪ್​ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವಾ , ಕಾಂಗ್ರೆಸ್​ ಪ್ರೊಟೊಕಾಲ್​ ಉಸ್ತುವಾರಿ ಬಾಲಾಜಿ, ಶಾಲಾ ಕಾರ್ಯದರ್ಶಿ ಶ್ರೀಶ ಭಟ್​ ಕಡೆಕಾರ್​ ಉಪಸ್ಥಿತರಿದ್ದರು. ಮಠದ ಸಿಇಒ ಪ್ರಹ್ಲಾದ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net