

ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯಿತಿಯ ಅನಂತಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಕೋಳಿ ತ್ಯಾಜ್ಯ ಕಾರ್ಖಾನೆಗಳು ಮತ್ತು ಎಣ್ಣೆ ಸಂಸ್ಕರಣಾ ಕಂಪನಿಗಳು ಹೊರಸೂಸುವ ದುರ್ವಾಸನೆಯಿಂದ ಸ್ಥಳೀಯರು ತೊಂದರೆಗೀಡಾಗಿದ್ದಾರೆ. ಮಕ್ಕಳು, ವೃದ್ಧರು ಕೆಮ್ಮು ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಅನಂತಪುರ ಮತ್ತು ಸುತ್ತಮುತ್ತಲ ಜನರಿಗೆ ಕಾರ್ಖಾನೆಗಳ ದುರ್ವಾಸನೆಯಿಂದ ಬಹಳ ತೊಂದರೆಯಾಗುತ್ತಿದೆ. ಈ ಕಾರ್ಖಾನೆಗಳನ್ನು ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರ ಮಾಡುವುದೇ ಶಾಶ್ವತ ಪರಿಹಾರ. ಎಲ್ಲ ಪ್ರದೇಶದ ನಾಗರಿಕರು ರಾಜಕೀಯರಹಿತವಾಗಿ ಈ ನಿಟ್ಟಿನಲ್ಲಿ ಒಂದಾಗಿ ಹೋರಾಟ ಮಾಡಬೇಕು.
— ಕೃಷ್ಣ ಆಳ್ವ , ಅನಂತಪುರ ಕ್ರಿಯಾ ಸಮಿತಿ ಉಪಾಧ್ಯಕ್ಷ