ಮಹಾನ್​ ನಾಯಕರ ಉದಾತ್ತ ಗುಣ ಮಾದರಿಯಾಗಲಿ

ಉಡುಪಿಯಲ್ಲಿ ಆಯೋಜಿಸಿದ್ದ ಬಾಬು ಜಗಜೀವನ್​ ರಾಮ್​ ಅವರ ಜನ್ಮದಿನ ಕಾರ್ಯಕ್ರಮವನ್ನು ಹರಿರಾಂ ಶಂಕರ್​ ಉದ್ಘಾಟಿಸಿದರು. ಅಬೀದ್​ ಗದ್ಯಾಳ್​, ನಾರಾಯಣ ಸ್ವಾಮಿ, ದಯಾನಂದ್​ ಡಿ. ಕಿದಿಯೂರು, ಸುಂದರ್ ಮಾಸ್ಟರ್, ಶ್ರೀದೇವಿ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಬಾಬು ಜಗಜೀವನ್​ ರಾಮ್​ ಅವರ ಜನ್ಮದಿನ ಕಾರ್ಯಕ್ರಮವನ್ನು ಹರಿರಾಂ ಶಂಕರ್​ ಉದ್ಘಾಟಿಸಿದರು. ಅಬೀದ್​ ಗದ್ಯಾಳ್​, ನಾರಾಯಣ ಸ್ವಾಮಿ, ದಯಾನಂದ್​ ಡಿ. ಕಿದಿಯೂರು, ಸುಂದರ್ ಮಾಸ್ಟರ್, ಶ್ರೀದೇವಿ ಇತರರಿದ್ದರು.
Published on

* ಉಡುಪಿ ಎಸ್ಪಿ ಹರಿರಾಂ ಶಂಕರ್​ ಆಶಯ

* ಡಾ. ಬಾಬು ಜಗಜೀವನ್​ ರಾಮ್​ ಜನ್ಮ ದಿನಾಚರಣೆ

ಉಡುಪಿ: ಭಾರತದ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನ್​ ರಾಮ್​ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದೇ ಸ್ಮರಿಸುತ್ತೇವೆ. ಅದರೊಟ್ಟಿಗೆ 1971ರಲ್ಲಿ ದೇಶದ ರಕ್ಷಣಾ ಸಚಿವರಾಗಿದ್ದಾಗ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಜಯ ಲಭಿಸುವಲ್ಲಿಯೂ ಅವರ ಜವಾಬ್ದಾರಿ ನೆನಪಲ್ಲಿಟ್ಟುಕೊಳ್ಳಬೇಕು. ಧೀಮಂತ ವ್ಯಕ್ತಿತ್ವದಿಂದ ಬಾಂಗ್ಲಾ ವಿಮೋಚನೆಯಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸಿದ್ದ ಮಹಾನ್​ ನಾಯಕರ ಉದಾತ್ತ ಗುಣ ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಹೇಳಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ (ಏ.5) ಆಯೋಜಿಸಿದ್ದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ್​ ರಾಮ್​ ಅವರ 119ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮತಾ ದಿವಸ್​ ಖ್ಯಾತಿ

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ಅವರ ಜನ್ಮದಿನವನ್ನು ಸಮತಾ ದಿವಸ್​ ಎಂದು ಆಚರಿಸುತ್ತೇವೆ. ಜಾತಿ-ಮತ, ಮೇಲು-ಕೀಳು ಎಂಬ ತಾರತಮ್ಯಮುಕ್ತ ಸಮಾನ ಸಮಾಜ ನಿರ್ಮಿಸಲು ಅವಿರತ ಶ್ರಮಿಸಿದ್ದಾರೆ. ದಲಿತರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಕೈಗೊಂಡ ಸಂಘಟನಾತ್ಮಕ ಕಾರ್ಯಗಳು ಇಂದಿಗೂ ಪ್ರಸ್ತುತ. ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಉನ್ನತಿ ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ವಿಶೇಷ ಉಪನ್ಯಾಸ ನೀಡಿದರು. ಸುಂದರ್ ಮಾಸ್ಟರ್, ವಿವಿಧ ಸಂಘಟನೆಗಳ ಮುಖಂಡರು, ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.
"

ಬಾಬೂಜಿಯವರು ದಕ್ಷತೆಗೆ ಹೆಸರುವಾಸಿ. ಐದು ದಶಕಗಳ ತಮ್ಮ ರಾಜಕೀಯ ಜೀವನದ ಇತಿಹಾಸದಲ್ಲಿ ಸುದೀರ್ಘ 30 ವರ್ಷ ಸಚಿವ ಸಂಪುಟದಲ್ಲಿದ್ದು ಕೃಷಿ, ಕಾರ್ಮಿಕ, ಕೈಗಾರಿಕೆ, ಸಾರಿಗೆ ಮತ್ತು ರೈಲ್ವೆ ಹೀಗೆ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿ ಮಹತ್ತರ ಬದಲಾವಣೆಗಳಿಗೆ ನಾಂದಿ ಹಾಡಿದ್ದರು. ಡಾ. ಬಿ.ಆರ್​. ಅಂಬೇಡ್ಕರ್​ ಅವರಂತೆಯೆ ಬಾಬೂಜಿ ಜೀವನ ಮತ್ತು ಸಾಧನೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net