ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್​ ನಿಧನ

ಇಂದಿರಾ ಶೇಖರ್​ ಕಲ್ಮಾಡಿ
ಇಂದಿರಾ ಶೇಖರ್​ ಕಲ್ಮಾಡಿ
Published on

ಉಡುಪಿ: ನಗರಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್​ ಕಲ್ಮಾಡಿ (68) ಹೃದಯಾಘಾತದಿಂದ ಭಾನುವಾರ ನಿಧನರಾದರು.

ಕಲ್ಮಾಡಿ ವಾರ್ಡ್​ ನಲ್ಲಿ ಬಿಜೆಪಿ ಮೊದಲ ನಗರ ಸಭಾ ಸದಸ್ಯೆಯಾಗಿ, 3 ಅವಧಿಗೆ ಚುನಾಯಿತರಾಗಿ ವಾರ್ಡಿನಲ್ಲಿ ಪಕ್ಷಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದರು. ಅವರು ಸರಳ ಸಜ್ಜನಿಕೆಯ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಡಾ. ವಿ.ಎಸ್​. ಆಚಾರ್ಯ ಅವರ ಗರಡಿಯಲ್ಲಿ ಬೆಳೆದು ಬಂದವರಾಗಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಪಕ್ಷ ಸಂಘಟನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಮೃತರು ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net